ಐತಿಹಾಸಿಕ ಸ್ಥಳಗಳ ರಕ್ಷಣೆ ಅಗತ್ಯ

Untitled design (4)
ಕೂಡ್ಲಿಗಿಯ ಮೈದಾನ ಗೆಳೆಯರ ಬಳಗ ಹಾಗೂ ಜೆಸಿಐ ಗೋಲ್ಡನ್ ತಂಡ ಜರಿಮಲೆ ಕೋಟೆಯನ್ನು ಸ್ವಚ್ಛಗೊಳಿಸುತ್ತಿರುವುದು. ಜೆಸಿಐ ಅಧ್ಯಕ್ಷ ಶ್ರೀಧರ ರಾಯ್ಕರ್, ಪದಾಧಿಕಾರಿಗಳಾದ ಡಾ.ಎ.ಎಸ್.ಗುರುರಾಜ, ಗುರುಬಸವರಾಜ, ಅಜಯ್, ಪಿ.ಉಮೇಶ್,ಜಿಲಾನ್, ಚನ್ನಬಸವನಗೌಡ, ರಜತ್, ಮಂಜುನಾಥ, ರವಿ ಗುರಿಕಾರ್, ಮಹಾಂತೇಶ್, ನಾಗರಾಜ ಇದ್ದರು.
Published on

ಕೂಡ್ಲಿಗಿ: ತಾಲೂಕು ಐತಿಹಾಸಿಕ ವೈಶಿಷ್ಟೃಗಳನ್ನು ಹೊಂದಿದ್ದು, ಈ ಪ್ರದೇಶದಲ್ಲಿ ಜರಿಮಲೆ, ಇವುಗಳ ರಕ್ಷಣೆಗೆ ಪ್ರಾಚ್ಯವಸ್ತು ಇಲಾಖೆ ಮುಂದಾಗಬೇಕು ಎಂದು ಜೆಸಿಐ ಗೋಲ್ಡನ್ ತಂಡದ ಸದಸ್ಯ ನಾಗರಾಜ ಕೊಟ್ರಪ್ಪನವರ್ ಹೇಳಿದರು.


ಪಟ್ಟಣದ ಮೈದಾನ ಗೆಳೆಯರ ಬಳಗ ಹಾಗೂ ಜೆಸಿಐ ಗೋಲ್ಡನ್ ತಂಡ ಹಮ್ಮಿಕೊಂಡಿದ್ದ ಜರಿಮಲೆ ಕೋಟೆ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಭಾನುವಾರ ಮಾತನಾಡಿದರು.


ಗುಡೇಕೋಟೆ ಒನಕೆ ಒಬವ್ವಳ ತವರು ಮನೆಯಾಗಿದ್ದು, ಈ ಭಾಗದಲ್ಲಿ ಶಿಲಾಯುಗದ ಕುರುಹುಗಳು ಪತ್ತೆಯಾಗಿವೆ. ಇಷ್ಟೆಲ್ಲಾ ಇತಿಹಾಸವಿರುವ ತಾಲೂಕನ್ನು ಪ್ರಾಚ್ಯವಸ್ತು ಇಲಾಖೆ ನಿರ್ಲಕ್ಷೃವಹಿಸಿದೆ.

ಮುಂದಿನ ಪೀಳಿಗೆಗೆ ಈ ಭಾಗದ ಇತಿಹಾಸ ಪರಿಚಯವಾಗಬೇಕಾದರೆ ಇಲ್ಲಿನ ಕೋಟೆ ಹಾಗೂ ಪಾಳೆಯಗಾರರ ಅವಶೇಷಗಳ ರಕ್ಷಣೆ ಮಾಡಬೇಕು. ನಮ್ಮ ತಂಡವು ಪ್ರತಿ ಭಾನುವಾರ ಇಂತಹ ಸ್ಥಳಗಳನ್ನು ಸ್ವಚ್ಛಗೊಳಿಸಿ ರಕ್ಷಣೆ ಕೆಲಸ ಮಾಡುತ್ತಿದೆ.

ಈಗಾಗಲೇ ಗಾಂಧಿ ಸ್ಮಾರಕ, ದೊಡ್ಡ ಆಲದ ಮರ, ರಸ್ತೆ, ಅನೇಕ ಕಲ್ಯಾಣಿಗಳನ್ನು ಸ್ವಚ್ಛ ಮಾಡಲಾಗಿದೆ. ಹೊಸ ಸ್ಥಳಗಳಲ್ಲಿ ಶ್ರಮದಾನ ಮಾಡುವ ಸಂಕಲ್ಪ ಹೊಂದಿದ್ದು, ಆಸಕ್ತರು ಭಾಗವಹಿಸಬಹುದು ಎಂದರು.


ಜೆಸಿಐ ಅಧ್ಯಕ್ಷ ಶ್ರೀಧರ ರಾಯ್ಕರ್, ಪದಾಧಿಕಾರಿಗಳಾದ ಡಾ.ಎ.ಎಸ್.ಗುರುರಾಜ, ಗುರುಬಸವರಾಜ, ಅಜಯ್, ಪಿ.ಉಮೇಶ್, ಜಿಲಾನ್, ಚನ್ನಬಸವನಗೌಡ, ರಜತ್, ಮಂಜುನಾಥ, ರವಿ ಗುರಿಕಾರ್, ಮಹಾಂತೇಶ್, ನಾಗರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net