ಅರ್ಜುನನಿಗೆ ಬೋಧಿಸಿದ ಸಾಲುಗಳೇ ಭಗವದ್ಗೀತೆ

PÜ®ÜPÜ
ಕನಕಗಿರಿ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ಶ್ರೀಕೃಷ್ಣ ಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು. ಗ್ರಾಪಂ ಸದಸ್ಯರಾದ ಪಾಮಣ್ಣ ಸಲ್ಲರ್, ಲಕ್ಷ್ಮಮ್ಮ ಗುರಿಕಾರ್, ಎಸ್‌ಡಿಎಂಸಿ ಅಧ್ಯಕ್ಷ ಯಮುನಪ್ಪ ಗಂಗಾವತಿ ಇತರರಿದ್ದರು.
Published on

ಕನಕಗಿರಿ: ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಬೋಧಿಸಿದ ಸಾಲುಗಳೇ ಹಿಂದೂಗಳು ಪೂಜಿಸುವ ಭಗವದ್ಗೀತೆಯಾಗಿದೆ ಎಂದು ಗೊಲ್ಲ ಸಮುದಾಯ ಗುರು ಹನುಮೇಶ ಯಾದವ್ ಹೇಳಿದರು.

ತಾಲೂಕಿನ ಬಂಕಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರದಂದು ಶ್ರೀಕೃಷ್ಣಜನ್ಮಾಷ್ಟಮಿ ಆಚರಣೆಯಲ್ಲಿ ಮಾತನಾಡಿದರು.
ಶ್ರಾವಣ ಮಾಸ ಕೃಷ್ಣ ಪಕ್ಷದ ಅಷ್ಟಮಿ ದಿನದಂದು ಮಥುರಾದಲ್ಲಿ ದೇವಕಿ ಮಗನಾಗಿ ಜನಿಸಿ, ಯಶೋಧೆ ಪಾಲನೆಯಲ್ಲಿ ಶ್ರೀಕೃಷ್ಣ ಬೆಳೆದನೆಂದು ಪುರಾಣಗಳಲ್ಲಿ ಉಲ್ಲೇಖವಿದೆ.

ದ್ರೌಪದಿಯ ಮಾನ ಕಾಪಾಡಿ ಹೆಣ್ಣಿನ ರಕ್ಷಣೆಗೆ ನಿಂತ. ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ಪರವಾಗಿ ಸಾರಥಿಯಾದ. ಸದಾ ನ್ಯಾಯದ ಪರವಾಗಿ ಇದ್ದ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಯಮುನಪ್ಪ ಗಂಗಾವತಿ, ಮುಖ್ಯೋಪಾಧ್ಯಾಯ ಶ್ರೀನಿವಾಸ್ ಹುನಗುಂದ, ಗ್ರಾಪಂ ಸದಸ್ಯರಾದ ಪಾಮಣ್ಣ ಸಲ್ಲರ್, ಲಕ್ಷ್ಮಮ್ಮ ಗುರಿಕಾರ್, ಸಿದ್ದೇಶ್ವರ, ಮಾಜಿ ಅಧ್ಯಕ್ಷ ಪಾಮಣ್ಣ ಬಿಲ್ಕಂಠಿ, ಪ್ರಮುಖರಾದ ಕನಕಪ್ಪ ಬಿಲ್ಕಂಟಿ, ನಾಗೇಶ್ ಬಂಡ್ರ, ಸೋಮನಾಥ್ ಬಿಲ್ಕಂಟಿ, ಪರಶುರಾಮ್, ನರೇಶ್ ಚಾಂದ್‌ಪಾಷ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net