ಭಗವದ್ಗೀತೆ ಓದಿದರೆ ತಿಳಿಯುವುದು ಜೀವನಸಾರ

HUN-SEP-6-1(KRISHNA JAYANTHI)
Published on

ಹುಣಸೂರು: ಭಗವದ್ಗೀತೆಯನ್ನು ಓದಿದರೆ ಜೀವನಸಾರವನ್ನು ಅರ್ಥೈಸಿಕೊಳ್ಳಬಹುದು ಎಂದು ಶಿರಸ್ತೇದಾರ್ ಶ್ರೀಪಾದ್ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ಮನುಷ್ಯನ ಬದುಕಿನ ಸಾರವನ್ನು ಭಗವದ್ಗೀತೆ ತಿಳಿಸುತ್ತದೆ. ಓದುವ ವ್ಯಕ್ತಿಯಲ್ಲಿ ಪರಿವರ್ತನೆ, ಬುದ್ಧಿಮತ್ತೆ ವೃದ್ಧಿ ಮತ್ತು ಪ್ರಾಪಂಚಿಕ ಆಲೋಚನೆಗೆಳಲ್ಲಿನ ಬದಲಾವಣೆಯನ್ನು ಗೀತೆಯ ಮೂಲಕ ಕಾಣಬಹುದಾಗಿದೆ. ಶ್ರೀಕೃಷ್ಣ ದ್ವಾಪರಯುಗದಲ್ಲೇ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನೂ ನೀಡಿದ್ದಾನೆ. ಗೀತೆಯ ವಾಚನದ ಮೂಲಕ ಸಂಸ್ಕೃತಿ, ಸಭ್ಯತೆ ಮತ್ತು ಪರಸಹಿಷ್ಣುತೆಯನ್ನು ಕಲಿಯಬಹುದು ಎಂದರು.

ಗ್ರೇಡ್-2 ತಹಸೀಲ್ದಾರ್ ನರಸಿಂಹಯ್ಯ ಮಾತನಾಡಿದರು. ಲೋಕೋಪಯೋಗಿ ಇಲಾಖೆ ಎಇಇ ಭೋಜರಾಜ್, ಶಿಶು ಅಭಿವೃದ್ಧಿ ಅಧಿಕಾರಿ ರಶ್ಮಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net