

ಬೆಂಗಳೂರು: ಅಂತರ್ಜಲ ಮತ್ತು ವಾತಾವರಣ ರಕ್ಷಣೆಗೆ ನೇರ ಸಂಪರ್ಕ ಹೊಂದಿರುವ ಜೌಗುಪ್ರದೇಶಗಳು ಕಸ ತುಂಬುವ ಸ್ಥಳವಾಗಿ ಪರಿವರ್ತನೆಯಾಗುತ್ತಿವೆ ಎಂದು ವಿಶ್ವ ಪ್ರಸಿದ್ಧ ಪರಿಸರ ತಜ್ಷೆ ಡಾ.ಮುಸೊಂಡ ಮುಂಬಾ ಕಳವಳ ವ್ಯಕ್ತಪಡಿಸಿದರು.
ಸಿನ್ಹಾಸಿ ಸಂಸ್ಥೆ ಮಲ್ಲೇಶ್ವರದ ಕೃಷ್ಣ ವೆಲ್ನೆಸ್ ಯೋಗ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ "ಜೌಗುಭೂಮಿ ಸಂರಣೆ ಮತ್ತು ಹವಾಮಾನ ಬದಲಾವಣೆ' ಸಂವಾದದಲ್ಲಿ ಮಾತನಾಡಿದರು.
ಭಾರತ ಸೇರಿ ವಿಶ್ವದಲ್ಲಿ 257 ಮಿಲಿಯನ್ ಹೆಕ್ಟೇರ್ ಜೌಗು ಪ್ರದೇಶವಿದೆ. ಇವುಗಳನ್ನು ರಕ್ಷಿಸುವುದರಿಂದ ಸರೋವರ, ಕೊಳ ಮತ್ತು ಭೂಗತ ನೀರಿನ ಟ್ಯಾಂಕ್ಗಳನ್ನು ತುಂಬಲು ಸಹಾಯ ಮಾಡುತ್ತವೆ. ಜೊತೆಗೆ,ಕುಡಿಯಲು, ಕೃಷಿ ಮತ್ತು ದೈನಂದಿನ ಬಳಕೆಗೆ ಹೆಚ್ಚಿನ ನೀರು ಲಭ್ಯವಾಗಲಿದೆ. ಜೌಗು ಪ್ರದೇಶಗಳು ಗಾಳಿಗೆ ತೇವಾಂಶ ಒದಗಿಸಿ ಮಳೆ ಪ್ರಮಾಣ ಹೆಚ್ಚಿಸಲಿದೆ. ಸ್ಪಂಜುಗಳಂತೆ ಕಾರ್ಯನಿರ್ವಹಿಸಿ ಪ್ರವಾಹಯಾಗುವುದನ್ನು ತಡೆಯಲಿದೆ ಎಂದರು.
ಹೆಚ್ಚುವರಿ ಮಳೆನೀರು ಹೀರಿ ಬೇಸಿಗೆಯಲ್ಲಿ ಭೂಮಿಯನ್ನು ತಂಪಾಗಿಡಲು ನೆರವಾಗುತ್ತದೆ. ಕೊಳಕು, ರಾಸಾಯನಿಕಗಳನ್ನು ಶೋಧಿಸಿ ಶುದ್ಧ ನೀರು ಒದಗಿಸಲಿದೆ. ಇಷ್ಟೆಲ್ಲಾ ಪ್ರಯೋಜನಕಾರಿ ಇರುವ ಜೌಗು ಪ್ರದೇಶವನ್ನು ರಸುವ ಕೆಲಸವನ್ನು ಮಕ್ಕಳಿಂದಲೇ ಪ್ರಾರಂಭಿಸಬೇಕು. ಈ ಬಗ್ಗೆ ಸರ್ಕಾರಗಳು ವಿಶೇಷ ಯೋಜನೆಗಳನ್ನು ರೂಪಿಸಬೇಕು. ಪ್ರತಿ ವರ್ಷ ಫೆ.2ರಂದು ವಿಶ್ವ ಜೌಗುಪ್ರದೇಶ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವೇಳೆ ನಡೆಯುವ ಬೃಹತ್ ಸಮಾವೇಶದಲ್ಲಿ ಭಾರತದಿಂದಲೂ ಸಾಕಷ್ಟು ಸ್ವಯಂ ಸೇವಕರು ಆಗಮಿಸುತ್ತಾರೆ ಎಂದು ಮುಸೊಂಡ ಮುಂಬಾ ಹೇಳಿದರು. ಅರಣ್ಯ ಇಲಾಖೆಯ ಅರಣ್ಯ ಪಡೆ ಮುಖ್ಯಸ್ಥೆ ಮೀನಾ ನೇಗಿ, ಪರಿಸರವಾದಿ ರೇವತಿ ಕಾಮತ್ ಸಿನ್ಹಾಸಿ ಸಂಸ್ಥೆಯ ಸಂಸ್ಥಾಪಕಿ ಮಿಮಿ ಪಾರ್ಥ ಸಾರಥಿ ಮತ್ತಿತರರಿದ್ದರು.
ರಾಜ್ಯದಲ್ಲಿ ಜೌಗುಪ್ರದೇಶ ಉತ್ತಮ ಸ್ಥಿತಿ: ರಾಜ್ಯದಲ್ಲಿರುವ 14,936 ಹೆಕ್ಟೇರ್ ಜೌಗುಪ್ರದೇಶ ಉತ್ತಮ ಸ್ಥಿತಿಯಲ್ಲಿದೆ. ಒಂದಷ್ಟು ಪ್ರದೇಶಗಳಷ್ಟೇ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡಲಿದೆ. ಇದರ ನಿರ್ವಹಣೆ ಸೂಕ್ತ ರೀತಿಯಲ್ಲಿ ಇದೆ. ಕಾಡು ಪ್ರಾಣಿಗಳನ್ನು ರಸುವತ್ತ ಸಾಕಷ್ಟು ಕ್ರಮವನ್ನು ಇಲಾಖೆ ತೆಗೆದುಕೊಳ್ಳುತ್ತಿದೆ. ಪ್ರಸ್ತುತ ರಾಜ್ಯದಲ್ಲಿ 563 ಹುಲಿ, 6,395 ಆನೆಗಳು ಮತ್ತು 1879 ಚಿರತೆಗಳಿವೆ. ಪ್ರಾಣಿಗಳು-ಮಾನವ ಸಂರ್ಷ ತಡೆಗೆ ಅತ್ಯಾಧುನಿಕ ಕ್ರಮ ಅಳವಡಿಸಿಕೊಂಡಿದ್ದೇವೆ ಎಂದು ಅರಣ್ಯ ಇಲಾಖೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಣಾಧಿಕಾರಿ ಕುಮಾರ್ ಪುಷ್ಕರ್ ಹೇಳಿದರು. ಪ್ರಾಣಿಗಳ ಚಲನವಲನವನ್ನು ಟ್ರಾಕ್ ಮಾಡುವ ವ್ಯವಸ್ಥೆ ಅಳವಡಿಸಿಕೊಂಡಿದ್ದೇವೆ. ಇತ್ತೀಚೆಗೆ ರೇಡಿಯೋ ಕಾಲರ್ ಅಳವಡಿಸಿಕೊಂಡಿದ್ದು, ಪ್ರಸ್ತುತ ಹುಲಿಗಳಿಗೆ ಟ್ರಾಕ್ ಮಾಡಲು ಇದನ್ನುಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಚಿರತೆ ಟ್ರಾಕ್ ಮಾಡಲು ಬಳಸಲಾಗುವುದು ಎಂದರು.