

ಬಿಡದಿ: ಇತ್ತೀಚಿನ ದಿನಗಳಲ್ಲಿ ಕೃಷಿ ಮಾಡಿ ಆದಾಯ ಕಾಣುವವರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಮಿಶ್ರ ಬೆಳೆ ಬೆಳೆದು ಕೃಷಿ ಲಾಭದಾಯಕ ಎಂಬುದನ್ನು ರೈತ ಶಿವರಾಜು ತೋರಿಸಿದ್ದಾರೆ.
ಹೌದು..! ಬಿಡದಿಯ ಗೋಪಹಳ್ಳಿಯ ಪ್ರಗತಿಪರ ರೈತ ಶಿವರಾಜು 14 ಎಕರೆ ಕೃಷಿ ಭೂಮಿಯಲ್ಲಿ ವ್ಯವಸಾಯದ ಮೂಲಕವೇ ಸಮೃದ್ಧ ಬದುಕು ಕಟ್ಟಿಕೊಂಡಿದ್ದು, ವಿಶ್ರ ಬೇಸಾಯದಿಂದ ಆದಾಯ ಮೂಲ ಕಂಡುಕೊಂಡಿದ್ದಾರೆ.
ತೆಂಗಿನಿಂದಲೂ ಆದಾಯ ತೆಂಗಿನ ಮರ ಇದ್ದರೆ ಮನೆಗೆ ಒಬ್ಬ ಮಗನಿದ್ದಂತೆ ಎಂಬ ಮಾತು ಜಿಲ್ಲೆಯಲ್ಲಿದೆ. ಅದರಂತೆ ಶಿವರಾಜು 7 ಎಕರೆಯಲ್ಲಿ ತೆಂಗಿನ ಮರ ಬೆಳೆಸಿದ್ದು, ಆದಾಯದ ಕಲ್ಪವೃಕ್ಷಗಳಾಗಿವೆ. ಸದ್ಯ ಮಾರುಕಟ್ಟೆಯಲ್ಲಿ ತೆಂಗಿಗೆ ಉತ್ತಮ ಬೆಲೆ ಇದ್ದು, 3&4 ತಿಂಗಳಿಗೊಮ್ಮೆಯಂತೆ ವರ್ಷದಲ್ಲಿ ಒಟ್ಟು 3 ಬಾರಿ ಕಾಯಿ ಕಿತ್ತು ಮಾರಾಟ ಮಾಡುತ್ತಾರೆ. ಹೈನುಗಾರಿಕೆ ವರದಾನ ತೆಂಗು&ಮಾವು ಜತೆಗೆ ಹೈನುಗಾರಿಕೆಗೂ ಶಿವರಾಜು ಅವರು ಒತ್ತು ನೀಡಿದ್ದಾರೆ. 7&8 ಉತ್ತಮ ತಳಿಯ ಸೀಮೆ ಹಸುಗಳನ್ನು ಸಾಕಣೆ ಮಾಡಿದ್ದಾರೆ. ಹಸುಗಳಿಗೆ ಸುಸಜ್ಜಿತ ಶೆಡ್ ಸಹ ನಿರ್ಮಾಣ ಮಾಡಿಕೊಂಡಿದ್ದಾರೆ. ಪ್ರತಿದಿನ 50 ಲೀ. ಹಾಲನ್ನು ಡೇರಿಗೆ ಹಾಕುತ್ತಾರೆ. ಪ್ರತಿ 15 ದಿನಕ್ಕೊಮ್ಮೆ ಹಣ ಬರುತ್ತಿದ್ದು, ಹಸುಗಳಿಗೆ ಪಶು ಆಹಾರ ಸೇರಿ ಇತರ ಖರ್ಚು ಕಳೆದು ಒಂದಿಷ್ಟು ಹಣ ಕೈ ಸೇರುತ್ತಿದೆ. ಜಲಾಧಾರವೇ ಬೋರ್ವೆಲ್ ಶಿವರಾಜು ಅವರು ನೀರಿಗಾಗಿ ಜಮೀನಿನಲ್ಲಿ ಬೋರ್ವೆಲ್ ಕೊರೆಸಿದ್ದಾರೆ. ಹಸುಗಳಿಗೆ ಮೆಕ್ಕೆಜೋಳ, ಸೀಮೆ ಹುಲ್ಲು ಬೆಳೆದುಕೊಳ್ಳುತ್ತಾರೆ. ತೆಂಗು, ಮಾವಿನ ಮಧ್ಯೆ ಭತ್ತ, ರಾಗಿಯನ್ನೂ ಬೆಳೆಯುತ್ತಾರೆ. 2 ಎಕರೆಯಲ್ಲಿ ಭತ್ತ, 2 ಎಕರೆಯಲ್ಲಿ ರಾಗಿ ನಾಟಿ ಅಧಿಕ ಇಳುವರಿ ಪಡೆಯುತ್ತಿದ್ದಾರೆ. ಯಾವುದಾದರೊಂದು ಬೆಳೆಗೆ ಉತ್ತಮ ಬೆಲೆ ಇದ್ದರೆ ಆದಾಯಗಳಿಸಬಹುದು ಎಂದು ಒಂದೇ ಬೆಳೆ ಬೆಳೆದು ಕೈ ಸುಟ್ಟುಕೊಳ್ಳುತ್ತಾರೆ. ಹಾಗಾಗಿ ಒಂದೇ ಬೆಳೆಯನ್ನು ನಂಬಿಕೊಳ್ಳದೆ ಮಿಶ್ರ ಬೆಳೆಗಳನ್ನು ಬೆಳೆಯಬೇಕು. ತೆಂಗು, ಮಾವು ಇದ್ದರಂತೂ ಆದಾಯ ಖಚಿತ. ತೆಂಗು, ಮಾವಿನೊಂದಿಗೆ ಉಪ ಬೆಳಗಳಾಗಿ ರಾಗಿ, ಭತ್ತ, ತರಕಾರಿ ಹಾಕಿಕೊಂಡಾಗ ಆದಾಯದಲ್ಲಿ ದ್ವಿಗುಣ ಕಾಣಬಹುದರು. > ಶಿವರಾಜು, ರೈತ ಗೋಪಹಳ್ಳಿ