ನಿಗದಿತ ಆಸ್ತಿ ತೆರಿಗೆ ಸಂಗ್ರಹಿಸಲು ಪಾಲಿಕೆ ವಿಫಲ

bbmp building
Published on

ಬೆಂಗಳೂರು: ಹೆಚ್ಚಿಸಲು ವಲಯವಾರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಎಲ್ಲ ಸುಸ್ತಿದಾರರಿಗೆ ನೋಟಿಸ್ ಜಾರಿಗೊಳಿಸಬೇಕು. ಶಿಕ್ಷಣ ಸಂಸ್ಥೆ, ಕ್ಲಬ್, ಮಾಲ್‌ಗಳಿಂದ ಆಸ್ತಿ ತೆರಿಗೆ ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು. ನ್ಯಾಯಾಯಲದಲ್ಲಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಂದಾಯ ಅಧಿಕಾರಿಗಳು ಸಮಸ್ಯೆ ಇತ್ಯರ್ಥಪಡಿಸಿ ಪಾಲಿಕೆಗೆ ಆಸ್ತಿ ತೆರಿಗೆ ಸಂಗ್ರಹಿಸಬೇಕು. ಬೆಸ್ಕಾಂ ದತ್ತಾಂಶದ ಆಧಾರ ಸ್ವತ್ತುಗಳನ್ನು ಪರಿಶೀಲಿಸಲಾಗುತ್ತಿದ್ದು, ವ್ಯತ್ಯಾಸ ಕಂಡುಬಂದ ಸ್ವತ್ತುಗಳಿಗೆ ನೋಟಿಸ್ ಜಾರಿಗೊಳಿಸಿ ದಂಡ ಹಾಗೂ ಬಡ್ಡಿಯೊಂದಿಗೆ ವಸೂಲಿ ನಾಡಬೇಕು... ತೆರಿಗೆ ಸಂಗ್ರಹ ಹೆಚ್ಚಿಸಲು ಏನೆಲ್ಲ ಕ್ರಮ ಗೊಳ್ಳಬೇಕೆಂದು ಕಂದಾಯ ಅಧಿಕಾರಿಗಳಿಗೆ ಪಾಲಿಕೆ ನೀಡಿರುವ ಸೂಚನೆಗಳಿವು.

ಪ್ರಸಕ್ತ ಸಾಲಿನಲ್ಲಿ ಪಾಲಿಕೆ 4,561 ಕೋಟಿ ರೂ. ಆಸ್ತಿ ಸಂಗ್ರಹ ಗುರಿ ಹಾಕಿಕೊಂಡಿದೆ. ಇದರನ್ವಯ ಏ. 1ರಿಂದ ಆ. 15ರವರೆಗೆ 2,521 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. ಇದರಲ್ಲಿ ಏಪ್ರಿಲ್‌ನಿಂದ ಜೂನ್‌ವರೆಗೆ 2,246 ಕೋಟಿ ರೂ. ತೆರಿಗೆ ಸ್ವೀಕಾರವಾಗಿದೆ. ಆದರೆ, ಆ.1ರಿಂದ ಆ. 15ರವರೆಗೆ ಕೇವಲ 73.52 ಕೋಟಿ ರೂ. ತೆರಿಗೆ ಬಂದಿದೆ. ಆಸ್ತಿತೆರಿಗೆ ಸಂಗ್ರಹ ಗುರಿಯಲ್ಲಿ ಇದುವರೆಗೆ ಶೇ. 55 ಪೂರ್ಣಗೊಂಡಿದ್ದು, ಉಳಿದಂತೆ ಶೇ. 45 ತೆರಿಗೆಯನ್ನು ಮುಂದಿನ 7 ತಿಂಗಳಲ್ಲಿ ಸಂಗ್ರಹಿಸಬೇಕಿದೆ. ಹೀಗಾಗಿ, ವಾರದ ಮತ್ತು ಮಾಸಿಕ ಗುರಿಯನ್ನು ಅಧಿಕಾರಿಗಳಿಗೆ ನಿಗದಿಪಡಿಸಲಾಗಿದೆ.

ಸೋರಿಕೆ ಹೇಗೆ?:

ನಗರದ ಕೆಲ ಮಾಲೀಕರು ವಾಣಿಜ್ಯ ಅಥವಾ ವಸತಿ ಕಟ್ಟಡಗಳ ವಿಸ್ತೀರ್ಣದ ಕುರಿತು ತಪ್ಪು ಮಾಹಿತಿ ನೀಡಿರುವ ಬಗ್ಗೆ ದೂರುಗಳಿವೆ. 30*40 ವಿಸ್ತೀರ್ಣದ ಮನೆ ಇದ್ದರೆ 20*30 ವಿಸ್ತೀರ್ಣವೆಂದು ಹೇಳಿ ತೆರಿಗೆ ಕಟ್ಟುತ್ತಿದ್ದಾರೆ. ಮಳಿಗೆಗಳ ಜತೆ ಶಾಮೀಲಾಗುವ ಅಧಿಕಾರಿಗಳು ನೆಪಮಾತ್ರಕ್ಕೆ ತೆರಿಗೆ ವಸೂಲಿ ಮಾಡಿ, ಇಂತಿಷ್ಟು ಮಾಮೂಲಿ ಪಡೆದು ಸುಮ್ಮನಾಗುತ್ತಿದ್ದಾರೆ. 2000 ಅಡಿ ವಾಣಿಜ್ಯ ಕಟ್ಟಡವನ್ನು ಸಾವಿರ ಅಡಿ ಇದೆಯೆಂದು ತೋರಿಸಿ ಅರ್ಧ ತೆರಿಗೆ ಹಣ ಕಟ್ಟುತ್ತಿದ್ದಾರೆ. ಕೆಲವೆಡೆ ತೆರಿಗೆ ವಂಚಿಸಲು ಕಟ್ಟಡಗಳನ್ನು ೋಷಿಸುತ್ತಿಲ್ಲ. ವಾಣಿಜ್ಯ ಕಟ್ಟಡಗಳಲ್ಲಿ ಒಪ್ಪಂದ ಅವಧಿ ಮುಗಿದರೂ ಹೊಸದಾಗಿ ಟೆಂಡರ್ ನಡೆಸದೆ ಅಧಿಕಾರಿಗಳ ಜತೆ ಮಾಲೀಕರು ಒಳಗೊಳಗೆ ಒಪ್ಪಂದ ಮಾಡಿಕೊಂಡು ತಿಂಗಳಿಗೆ ಇಂತಿಷ್ಟು ಫಿಕ್ಸ್ ಮಾಡಿ ಹಣ ನೀಡುತ್ತಿದ್ದಾರೆ. ಈ ಎಲ್ಲ ಲೋಪಗಳಿಂದ ಪ್ರತಿವರ್ಷ ಸಾವಿರಾರು ಕೋಟಿ ರೂ. ಸೋರಿಕೆಯಾಗುತ್ತಿದೆ. ಹಾಗಾಗಿ, ಇದನ್ನು ತಡೆಯಲು ಯೋಜನೆಯಡಿ ಪ್ರಾಪರ್ಟಿ ವೇರಿಫಿಕೇಷನ್ ಮಾಡಬೇಕಿದೆ.

10,516 ಕಟ್ಟಡಗಳಿಗೆ ನೋಟಿಸ್:

ಪಾಲಿಕೆ ವ್ಯಾಪ್ತಿಯಲ್ಲಿ ತಪ್ಪು ಮಾಹಿತಿ ನೀಡಿ ಆಸ್ತಿ ತೆರಿಗೆ ೋಷಿಸಿಕೊಂಡಿರುವ 10,516 ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ. ಈ ಪ್ರಕರಣಗಳಲ್ಲಿ 5.61 ಕೋಟಿ ರೂ. ತೆರಿಗೆ ವಸೂಲಿ ಆಗಿದೆ. ಆದರೆ, ನಗರದಲ್ಲಿ ಸಾವಿರಾರು ಕಟ್ಟಡಗಳು ಇನ್ನೂ ಆಸ್ತಿ ತೆರಿಗೆ ೋಷಿಸಿಕೊಂಡಿಲ್ಲ. ತೆರಿಗೆ ೋಷಿಸದ ಕಟ್ಟಡಗಳನ್ನು ಪತ್ತೆಹಚ್ಚಲು ಹಿಂದೆ ಬಿಬಿಎಂಪಿ ವಿಲವಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 18,52,802 ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗಿದೆ. 2021- 22ನೇ ಸಾಲಿನಿಂದ ಈವರೆಗೂ ಸ್ವಯಂೋಷಿತ ಆಸ್ತಿತೆರಿಗೆ ಪದ್ಧತಿಯಡಿ ಒಟ್ಟು 13,56,087 ಸ್ವತ್ತುಗಳಿಗೆ ತೆರಿಗೆ ಪಾವತಿಸಲಾಗುತ್ತಿದೆ. ಇದರಲ್ಲಿ 97,057 ವಾಣಿಜ್ಯ ಕಟ್ಟಡಗಳು, 9112 ಬಹುಮಹಡಿ ವಸತಿ ಸಂಕೀರ್ಣಗಳು ಹಾಗೂ 12,59,030 ವಸತಿ ಯೋಗ್ಯ ಮನೆಗಳಿವೆ. ಉಪಯೋಗದ ಕಟ್ಟಡಗಳನ್ನು ವಿವಿಧ ವರ್ಗಗಳಾಗಿ ವಿಂಗಡಿಸಿ ಪ್ರತಿ ವರ್ಗಕ್ಕೂ ಪ್ರತ್ಯೇಕ ದರದಲ್ಲಿ ಆಸ್ತಿ ತೆರಿಗೆಯನ್ನು ನಿಗದಿಪಡಿಸಲಾಗಿದೆ. ವಾಣಿಜ್ಯ ಕಟ್ಟಡಗಳಿಗೆ ಯೂನಿಟ್ ಏರಿಯಾ ವ್ಯಾಲ್ಯೂ ಮೌಲ್ಯದ ಶೇ.25 ತೆರಿಗೆಯನ್ನು ವಿಧಿಸಲಾಗುತ್ತಿದೆ. ಬಹುಮಹಡಿ ವಸತಿ ಸಂಕೀರ್ಣಗಳಲ್ಲಿರುವ ಜಿಮ್, ಕ್ಲಬ್‌ಹೌಸ್ ಹಾಗೂ ಈಜುಕೊಳವನ್ನು ವಸತಿ ವರ್ಗದ ಸ್ವಂತ ಉಪಯೋಗದ ಆಧಾರದಡಿಯಲ್ಲಿ ಆಸ್ತಿ ತೆರಿಗೆ ನಿಗದಿಪಡಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. 578 ಬಹುಮಹಡಿ ವಸತಿ ಸಂಕೀರ್ಣಗಳು ಬಿಬಿಎಂಪಿಗೆ ತೆರಿಗೆ ಪಾವತಿಸುತ್ತಿವೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net