ಭರವಸೆ ಈಡೇರಿಸದ ಪಕ್ಷಗಳ ಮಾನ್ಯತೆ ರದ್ದಾಗಬೇಕು - ಉಗ್ರಪ್ಪ ಒತ್ತಾಯ

Ugrappa
ಕೆಪಿಸಿಸಿ ಮಾಧ್ಯಮ ಸಮಿತಿ ಅಧ್ಯಕ್ಷ ಉಗ್ರಪ್ಪ.
Published on

ಸಂಡೂರು: ಚುನಾವಣಾ ವೇಳೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಶೆ.75 ಈಡೇರಿಸದ ಪಕ್ಷಗಳ ಮಾನ್ಯತೆ ರದ್ದುಗೊಳಿಸಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಒತ್ತಾಯಿಸಿದರು.

ಕೃಷ್ಣಾನಗರದ ಶಾಸಕರ ಸಂಪರ್ಕ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಬುಧವಾರ ಮಾತನಾಡಿದರು. 2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಕೊಟ್ಟ ಭರವಸೆಗಳನ್ನು ಈಡೇರಿಸಲಿಲ್ಲ. ಕೊಟ್ಟ ಮಾತಿನಲ್ಲಿ ಕನಿಷ್ಠ ಶೇ.10 ಕೂಡ ನೆರವೇರಿಸಲಿಲ್ಲ. ಪ್ರಜೆಗಳಿಗೆ ಬೆಲೆ ಏರಿಕೆ ಬರೆ ಹಾಕಿತು ಎಂದರು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net