ನಿಷೇಧಿತ ತಂಬಾಕು ಉತ್ಪನ್ನ ವಶ

Tobacco
Published on

ಕಾಸರಗೋಡು: ಕಾಞಂಗಾಡಿನ ಸೂಪರ್ ಮಾರ್ಕೆಟ್ ಮಾಲೀಕನ ಕ್ವಾಟ್ರಸ್‌ಗೆ ದಾಳಿ ನಡೆಸಿದ ಪೊಲೀಸರು ಭಾರಿ ಪ್ರಮಾಣದ ನಿಷೇಧಿತ ತಂಬಾಕು ಉತ್ಪನ್ನ ವಶಪಡಿಸಿಕೊಂಡಿದ್ದು, ಸೂಪರ್‌ಮಾರ್ಕೆಟ್ ಮಾಲೀಕನನ್ನು ಬಂಧಿಸಿದ್ದಾರೆ. ಕಾಸರಗೋಡು ಕೊರಕ್ಕೋಡು ನಿವಾಸಿ ಕೆ.ಎಂ.ಜಾಬಿರ್ ಬಂಧಿತ. ಒಟ್ಟು 1621 ಪ್ಯಾಕೆಟ್ ತಂಬಾಕು ಉತ್ಪನ್ನ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಕಾಞಂಗಾಡಿನ ಮಡಿಯನ್ ಕುಲೋಂ ಸನಿಹದ ಕ್ವಾಟ್ರಸ್‌ಗೆ ದಾಳಿ ನಡೆಸಿದಾಗ ಕೊಠಡಿಯೊಳಗಿನ ಮಂಚದಡಿ ದಾಸ್ತಾನಿರಿಸಿದ ತಂಬಾಕು ಪತ್ತೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net