ಗ್ಯಾರಂಟಿ ಸಮಿತಿಗೆ ಕ್ಷೇತ್ರ ಹೊಣೆ : ಸ್ಪೀಕರ್ ಯು.ಟಿ.ಖಾದರ್ ಮಾಹಿತಿ : ದೇರಳಕಟ್ಟೆಯಲ್ಲಿ ಪ್ರಗತಿ ಪರಿಶೀಲನಾ ಸಭೆ

belma
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಕ್ಷೇತ್ರದ ಎಲ್ಲ ಕಡೆ ಹೋಗಲು ಆಗದ ಕಾರಣ ನಾನು ತಂದಿರುವ ಅನುದಾನಕ್ಕೆ ತಕ್ಕಂತೆ ಕೆಲಸ ಆಗುತ್ತಿದೆಯೇ, ಕ್ಷೇತ್ರದಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂಬುದನ್ನು ತಿಳಿದು ಗಮನಕ್ಕೆ ತರುವ ಮಹತ್ತರ ಜವಾಬ್ಧಾರಿಯನ್ನು ಗ್ಯಾರಂಟಿ ಸಮಿತಿಗೆ ನೀಡಲಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ದೇರಳಕಟ್ಟೆಯಲ್ಲಿರುವ ಬೆಳ್ಮ ಗ್ರಾಪಂ ಸಭಾಂಗಣದಲ್ಲಿ ಗುರುವಾರ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ವಾತನಾಡಿದರು.

ಜನಸಾವಾನ್ಯರಿಗೆ ಇರುವ ಯೋಜನೆ ಇದಾಗಿದೆ. ಅರ್ಜಿಯನ್ನೇ ಹಾಕದವರು ಇನ್ನೂ ಸಾಕಷ್ಟು ಮಂದಿ ಗ್ರಾಮೀಣ ಭಾಗದಲ್ಲಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಂಡವಾಗಿ ಕೆಲಸ ವಾಡಿದಾಗ ಶೇ.100 ಗುರಿ ತಲುಪಲು ಸಾಧ್ಯ ಎಂದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಉಳ್ಳಾಲ ತಾಲೂಕು ಅಧ್ಯಕ್ಷ ಮೊಹಮ್ಮದ್ ರಫೀಕ್‌ಮಾತನಾಡಿ, ತಾಲೂಕಿನಲ್ಲಿ ಶೇ.92ರಷ್ಟು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಆಗಿದ್ದು, ಶೇ.8ರಷ್ಟು ಫಲಾನುಭವಿಗಳಿಗೆ ಸಮಸ್ಯೆ ಇದೆ. ಈ ಬಗ್ಗೆ ಅಧಿಕಾರಿಗಳಲ್ಲಿ ಚರ್ಚಿಸಿ ಪರಿಹಾರ ಕಲ್ಪಿಸಲಾಗುವುದು. ಸಮಸ್ಯೆ ಇದ್ದವರು ಮೊಬೈಲ್ ಸಂಖ್ಯೆ ಕೊಟ್ಟರೆ ಅವರ ಮನೆಗಳಿಗೆ ಹೋಗಿ ವಾತನಾಡಬಹುದು ಎಂದರು.

ಬಡವರು ಹೊಸ ಮನೆಗಳನ್ನು ಕಟ್ಟುವ ಸಂದರ್ಭ ಬ್ಯಾಂಕ್ ಸಾಲಕ್ಕಾಗಿ ಐಟಿ ಪಾವತಿಸುತ್ತಾರೆ. ಐಟಿ ಪಾವತಿಸಿರುವ ಕಾರಣ ಅವರಿಗೆ ಗಹಲಕ್ಷ್ಮೀ ಯೋಜನೆ ಸಿಗುತ್ತಿಲ್ಲ ಎಂದು ಸಮಿತಿ ಸದಸ್ಯ ಬಶೀರ್ ಉಂಬುದ ಗಮನ ಸೆಳೆದರು.

ತಹಸೀಲ್ದಾರ್ ಪುಟ್ಟರಾಜು, ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದಯಾನಂದ ಬಿ., ಉಳ್ಳಾಲ ನಗರಸಭೆ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಸಪ್ನಾ, ಗ್ಯಾರಂಟಿ ಅನುಷ್ಠ್ಠಾನ ಸಮಿತಿ ಸದಸ್ಯರಾದ ದೇವಣ್ಣ ಶೆಟ್ಟಿ ಕೊಣಾಜೆ, ಬಶೀರ್ ಉಂಬುದ, ಸಮೀರ್ ಪಜೀರ್, ವಿಲ್ಫ್ರೆಡ್ ಡಿಸೋಜ, ಅಬ್ದುಲ್ ಸಲಾಂ ಕೆ.ಸಿ.ರೋಡು, ರಾವ ಉಚ್ಚಿಲ್, ಜೆಸಿಂತಾ, ರೇವತಿ ಮೊದಲಾದವರಿದ್ದರು.

ತಾಲೂಕು ಪಂಚಾಯಿತಿ ಸಿಇಒ ಗುರುದತ್ ಸ್ವಾಗತಿಸಿದರು.

ಸಿಡಿಪಿಒ ಗೈರಿಗೆ ಅಸವಾಧಾನ

ತಾಲೂಕು ಮಟ್ಟದ ಸಭೆ ಆಗಿದ್ದರೂ ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆಯ ಸಿಡಿಪಿಒ ಗೈರಾಗಿದ್ದು ಸೂಪರ್ ವೈಸರ್‌ಗಳನ್ನು ಕಳುಹಿಸಿದ್ದರು. ಇದರಿಂದ ಅಸವಾಧಾನಗೊಂಡ ಖಾದರ್, ಅಧಿಕಾರಿಗಳಿಗೆ ಬರಲಾಗದಿದ್ದರೆ ಅಧ್ಯಕ್ಷರಿಗೆ ಕರೆ ವಾಡಿ ತಿಳಿಸಬೇಕು. ಇಲ್ಲದಿದ್ದರೆ ನೋಟಿಸ್ ನೀಡಲಾಗುವುದು ಎಂದು ಸ್ಪೀಕರ್ ಎಚ್ಚರಿಸಿದರು.

ಗ್ಯಾರಂಟಿ ಸಮಿತಿ ಅಧ್ಯಕ್ಷರು, ಸದಸ್ಯರು ತನ್ನೊಂದಿಗೆ ತಿರುಗಾಡುವ ಬದಲು ಗ್ರಾಪಂ ವಾರ್ಡುಗಳಲ್ಲಿ ತಿರುಗಾಡಬೇಕು. ಸದಸ್ಯರೂ ಪ್ರತೀ ಬೂತ್‌ಗೆ ತಿರುಗಾಡಿ ಅರ್ಹರನ್ನು ಗುರುತಿಸಬೇಕು. ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಆಗದಿದ್ದರೆ ನಮ್ಮ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಿಕೊಳ್ಳಿ. - ಯು.ಟಿ.ಖಾದರ್, ಸ್ಪೀಕರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net