ಉಪ್ಪಿನಕುದ್ರುವಿನಲ್ಲಿ ತಿಂಗಳ ಕಾರ್ಯಕ್ರಮ

sanmana
ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ 99ನೇ ತಿಂಗಳ ಕಾರ್ಯಕ್ರಮದಲ್ಲಿ ಶ್ರೀಧರ್ ನಾಯಕ್ ಗುಡ್ಡೆಯಂಗಡಿ ದಂಪತಿಯನ್ನು ಸನ್ಮಾನಿಸಲಾಯಿತು
Published on

ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ವಿಚಾರದಡಿ 99ನೇ ತಿಂಗಳ ಕಾರ್ಯಕ್ರಮ ಭಾನುವಾರ ನಡೆಯಿತು.

ಕಲಾವಿದ ಶ್ರೀಧರ್ ನಾಯಕ್ ಗುಡ್ಡೆಯಂಗಡಿ ದಂಪತಿಯನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಗಂಗೊಳ್ಳಿಯ ಡಾ ಕಾಶಿನಾಥ್ ಪೈ ಅಧ್ಯಕ್ಷತೆ ವಹಿಸಿದ್ದರು. ಸತೀಶ್ ನಾಯಕ್ ಗುಡ್ಡೆಯಂಗಡಿ, ಶ್ರೀಕಾಂತ್ ಶ್ಯಾನುಭಾಗ್, ಶ್ರೀಧರ್ ನಾಯಕ್, ರಾಘವೇಂದ್ರ ನೆಂಪು ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ್ ನಾಯಕ್ ಹಾಗೂ ತಂಡದ ವತಿಯಿಂದ ವೇಣು ವಾದನ ಹಾಗೂ ಸಿಳ್ಳು ವಾದನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net