ಲಾಭದತ್ತ ಮರ್ಚಂಟ್ಸ್​ ಕೋ&ಆಪರೇಟಿವ್​

15blh1 merchent bank
Published on

ಬೈಲಹೊಂಗಲ: ನಗರದ ದಿ.ಬೈಲಹೊಂಗಲ ಮರ್ಚಂಟ್ಸ್​ ಕೋ&ಆಪರೇಟಿವ್​ ಬ್ಯಾಂಕ್​ 45.45 ಲ ರೂ. ನಿವ್ವಳ ಲಾಭಗಳಿಸಿ ಪ್ರಗತಿಯತ್ತ ಮುನ್ನಡೆಯುತ್ತಿದೆ ಎಂದು ಬ್ಯಾಂಕ್​ ಅಧ್ಯ ಬಸವರಾಜ ಮೂಗಿ ಹೇಳಿದರು. ನಗರದ ದಿ.ಬೈಲಹೊಂಗಲ ಮರ್ಚಂಟ್ಸ್​ ಬ್ಯಾಂಕ್​ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 60ನೇ ಮಹಾಸಭೆಯಲ್ಲಿ ಮಾತನಾಡಿ, ಬ್ಯಾಂಕಿನ ಮಾಜಿ ಅಧ್ಯರಾಗಿದ್ದ ದಿ.ಶೈಲಪ್ಪ ಮೂಗಿ, ಶಿವಬಸಪ್ಪ ಗಡತರನವರ ಹಾಕಿಕೊಟ್ಟ ಸನ್ಮಾರ್ಗದಡಿ ಬ್ಯಾಂಕ್​ ಸದಸ್ಯರಿಗೆ ಉತ್ತಮ ಸೇವೆ ಸಲ್ಲಿಸುತ್ತಿದೆ. ಬ್ಯಾಂಕ್​ 43.85 ಕೋಟಿ ರೂ. ಠೇವಣಿ, 56.45 ಕೋಟಿ ರೂ. ದುಡಿಯುವ ಬಂಡವಾಳ, 27.98 ಕೋಟಿ ರೂ. ಸಾಲ, ಗ್ರಾಹಕರ 5 ಲ ರೂ. ಮೊತ್ತಕ್ಕೆ ವಿಮೆ ನೀಡಲಾಗಿದೆ ಎಂದರು. ಕೆಎಲ್​ಇ ನಿರ್ದೇಶಕ ಡಾ.ವಿಶ್ವನಾಥ ಪಾಟೀಲ, ಉಪಾಧ್ಯ ವಿ.ಎನ್​.ಪಾಟೀಲ, ನಿರ್ದೇಶಕರಾದ ಬಸನಗೌಡ ಪಾಟೀಲ, ರಾಜಶೇಖರ ಮೂಗಿ, ಎ.ಎಸ್​.ಹರಕುಣಿ, ಎಸ್​.ಎಂ.ಹೊಸಮನಿ, ಮಹಾಂತೇಶ ಮೂಗಿ, ಮಲ್ಲಯ್ಯ ರುದ್ರಾಪುರ, ವೀರೇಶ ಹೊಳೆಪ್ಪನವರ, ಬಿ.ಕೆ.ಪಾಟೀಲ, ಜಿ.ಬಿ.ಕೇಂದ್ರಿ, ವಿ.ಎಂ.ಮುರಗೋಡ, ಆನಂದ ಮೂಗಿ, ಲೋಕರೆಪ್ಪ ಬಂಡಿವಡ್ಡರ, ಎಸ್​.ಎಸ್​.ತುರಮರಿ, ಕೆ.ವಿ.ಗಡತರನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net