ಅಪಘಾತದಲ್ಲಿ ಪ್ರಾಧ್ಯಾಪಕ ಸಾವು

Published on

ಶಾಲೆಯಿಂದ ಹೊರಬರುತ್ತಿದ್ದಂತೆ ಡಿಕ್ಕಿ ಹೊಡೆದ ಕಾರು

ಕನಕಪುರ: ತರಗತಿ ಮುಗಿಸಿಕೊಂಡು ಬೈಕ್‌ನಲ್ಲಿ ಶಾಲೆಯಿಂದ ಹೊರಬರುತ್ತಿದ್ದ ವೇಳೆ ರಸ್ತೆ ತಿರುವಿನಲ್ಲಿ ಕಾರು ಡಿಕ್ಕಿ ಹೊಡೆದು ಪ್ರಾಧ್ಯಾಪಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸಾತನೂರು ರಸ್ತೆ ಬಟ್ಟಲುಗುಂಡಪ್ಪ ಬೆಟ್ಟದ ಬಳಿ ಇರುವ ನವೋದಯ ಶಾಲೆ ಪ್ರಾಧ್ಯಾಪಕ ಎಂ.ಶಿವಶಂಕರ್ (59) ಮೃತ. ನವೋದಯ ಶಾಲೆಯಲ್ಲಿ ಜೀವಶಾಸ ಪ್ರಾಧ್ಯಾಪಕರಾಗಿದ್ದ ಇವರು, ಶನಿವಾರ ಕೆಲಸ ಮುಗಿಸಿ ಬೈಕ್‌ನಲ್ಲಿ ಹೊರಟಿದ್ದಾಗ ಶಾಲೆಯ ಎದುರು ಕಾರು ಡಿಕ್ಕಿ ಹೊಡೆದಿದೆ.

ಮಂಡ್ಯದ ಶ್ರೀರಾಮನಗರದ ನಿವಾಸಿಯಾಗಿರುವ ಶಿವಶಂಕರ್‌ಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಪ್ರಾಂಶುಪಾಲ ಕುಮಾರ್ ಮತ್ತು ಇತರ ಶಿಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸರ್ಕಲ್ ಇನ್‌ಸ್ಪೆಕ್ಟರ್ ಮಿಥುನ್‌ಶಿಲ್ಪಿ, ಎಸ್‌ಐ ಜಾನಿ ಪ್ರಕಾಶ್ ಮತ್ತು ಸಿಬ್ಬಂದಿ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net