

ಕನಕಗಿರಿ: ಗೋಡೆಗಳ ಮೇಲೆ ಅಶ್ಲೀಲ ಪದಗಳನ್ನು ಬರೆಯುತ್ತಿರುವ ಕಿಡಿಗೇಡಿಗಳನ್ನು ಬಂಧಿಸಲು ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಪಾಲಕರು ಪಟ್ಟಣದ ಕೆಪಿಎಸ್ ಶಾಲೆಯ ಮುಂಭಾಗ ಶನಿವಾರ ಪ್ರತಿಭಟಿಸಿದರು.
ಕಳೆದೊಂದುವರೆ ವರ್ಷದಿಂದ ಕೆಲ ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡಿ ಕಿಡಿಗೇಡಿಗಳು ಟಾರ್ಗೆಟ್ ಮಾಡುತ್ತಿದ್ದಾರೆ. ಪುಂಡರ ತಂಡವೊಂದು ಪಟ್ಟಣದಲ್ಲಿ ಅಶ್ಲೀಲವಾಗಿ ಶಾಲಾ-ಕಾಲೇಜು, ಧಾರ್ಮಿಕ ಕಟ್ಟಡಗಳು, ಸಾರ್ವಜನಿಕ ಕಟ್ಟಡಗಳಿಗೆ ಬರೆಯುತ್ತಿರುವುದನ್ನು ಎಂದು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಆಕ್ರೋಶ ವ್ಯಕ್ತಪಡಿಸಿದರು.
ಅಶ್ಲೀಲ ಬರವಣಿಗೆ ಬರೆಯುತ್ತಿರುವುದಕ್ಕೆ ಕಳೆದ ವರ್ಷವೇ ಪಾಲಕರೊಬ್ಬರು ಪ್ರಕರಣ ದಾಖಲಿಸಿದ್ದರೂ ಕಿಡಿಗೇಡಿಗಳ ಬಂಧನವಾಗಿಲ್ಲ. ಆ ಬಳಿಕ ತಣ್ಣಗಾಗಿದ್ದ ಪ್ರಕರಣ ಕಳೆದ 25 ದಿನಗಳ ಹಿಂದೆ ಜೂ.18ರಿಂದ ಮತ್ತೇ ಆರಂಭಗೊಂಡಿದೆ. ಜನ ಸಂಚಾರವಿಲ್ಲದ ವೇಳೆಯಲ್ಲಿ ತಡರಾತ್ರಿ ಪುಂಡರು ವಿದ್ಯಾರ್ಥಿನಿಯರ ವಿರುದ್ಧ ಅಶ್ಲೀಲವಾಗಿ ಬರೆಯುವುದು, ಶಿಕ್ಷಕರಿಗೆ ಬೆದರಿಕೆ ಪತ್ರ ಬರೆದಿದ್ದಾರೆ. ಇನ್ ಸ್ಟಾಗ್ರಾಂನಲ್ಲಿಯೂ ಪಾಲಕರಿಗೆ ಕೆಟ್ಟದ್ದಾಗಿ ಸಂದೇಶ ಕಳುಹಿಸಿದ್ದು, ಈ ಪ್ರಕರಣದ ವಿರುದ್ಧ ಎರಡನೇ ಪ್ರಕರಣ ದಾಖಲಾಗಿಸಲಾಗಿದೆ. ಆದರೂ, ಪೊಲೀಸರ ಕೈಗೆ ಕಿಡಿಗೇಡಿಗಳ ಸಿಕ್ಕಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಮದುವೆ ಮನೆಗೆ ಕನ್ನ ಹಾಕಿದ ಕಳ್ಳರು
ಮನವಿ ಸ್ವೀಕರಿಸಿದ ಡಿವೈಎಸ್ಪಿ ಆರ್.ಎಸ್ ಉಜ್ಜನಕೊಪ್ಪ ಮಾತನಾಡಿ, ಈ ಪ್ರಕರಣ ಬೇಧಿಸಲು ಇಲಾಖೆ ಸನ್ನದ್ಧವಾಗಿದೆ. ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು. ಎಸ್‌ಎಫ್‌ಐನ ತಾಲೂಕು ಕಾರ್ಯದರ್ಶಿ ಶಿವಕುಮಾರ, ಜಿಲ್ಲಾಧ್ಯಕ್ಷ ಸಯ್ಯದ್ ಸುಬಾನ್, ವಿದ್ಯಾರ್ಥಿ ಮುಖಂಡ ನೀಲಕಂಠ ಬಡಿಗೇರ ಇತರರಿದ್ದರು.