ವಿಶ್ವ ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರಿನ ಶಿವಕುಮಾರ್ !

Scientis
Published on

ತುಮಕೂರು: ಅಮೆರಿಕಾದ ಪ್ರತಿಷ್ಠಿತ ಸ್ಟಾೃನ್‌ಫೋರ್ಡ್ ವಿಶ್ವವಿದ್ಯಾಲಯದ ವಿಶ್ವದ ವಿಜ್ಞಾನಿಗಳ ಗುಣಮಟ್ಟದ ಸಂಶೋಧನೆಯ ಪಟ್ಟಿಯಲ್ಲಿ ತುಮಕೂರು ಜಿಲ್ಲೆಯ ವಿಜ್ಞಾನಿ ಡಾ.ಐ.ಎಸ್.ಶಿವಕುಮಾರ್ ಸ್ಥಾನಪಡೆಯುವ ಮೂಲಕ ಜಿಲ್ಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ಮೂಲತಃ ತುಮಕೂರು ತಾಲೂಕಿನ ಐನಾಪುರದ ಡಾ.ಐ.ಎಸ್.ಶಿವಕುಮಾರ್ ಬೆಂಗಳೂರು ವಿಶ್ವವಿದ್ಯಾಲಯದ ಗಣಿತ ವಿಭಾಗದ ನಿವೃತ್ತ ಪ್ರಾಧ್ಯಪಕರಾಗಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ಟ್ರಾನ್ಸ‌ಫೋರ್ಟ್ ವಿಭಾಗದಲ್ಲಿ ಜಾಗತಿಕ ಮಟ್ಟದಲ್ಲಿ 1494ನೇ ಸ್ಥಾನ ಪಡೆದಿದ್ದಾರೆ. ದ್ರವಚಲನಶಾಸ್ತ್ರದಲ್ಲಿ ಉನ್ನತ ಸಂಶೋಧನ ಕೈಗೊಂಡಿರುವ ಶಿವಕುಮಾರ್ ಈವರೆಗೆ 220 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

ವಿಶ್ವದ ಅತ್ಯುನ್ನತ ಸಂಶೋಧನ ಸಂಸ್ಥೆಗಳಾದ ಜರ್ಮನಿಯ ಮ್ಯಾಕ್ಸ್‌ಫ್ಲಾೃಂಕ್ ಇನ್ಸಿಟಿಟ್ಯೂಟ್, ದಿ ಹಾಂಕಾಂಗ್ ವಿಶ್ವವಿದ್ಯಾಲಯ, ಚೀನಾ ದೇಶದ ಶಾಂಘೈನ ಜಿಯಾವ್‌ಟಾಂಗ್ ವಿವಿ ಸೇರಿದಂತೆ ವಿವಿಧ ವಿವಿಗಳಲ್ಲಿ ಸಂದರ್ಶಕ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ಅನ್ವಯಿಕ ಗಣಿತಶಾಸ್ತ್ರದಲ್ಲಿ ಸಂಶೋಧನೆ ನಡೆಸಿದ್ದಾರೆ.

ಶಿವಕುಮಾರ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ತುಮಕೂರು ಸ್ನಾತಕೋತ್ತರಕೇಂದ್ರದ ನಿರ್ದೇಶಕರಾಗಿ ನಂತರ ಸ್ಥಾಪನೆಯಾದ ತುಮಕೂರು ವಿಶ್ವವಿದ್ಯಾಲಯದ ಕುಲಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಶಿವಕುಮಾರ್ ಜಿಲ್ಲೆ, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net