

ಲಕ್ಷ್ಮೇಶ್ವರ: ಪುಲಿಗೆರೆ ತಿರುಳ್ಗನ್ನಡ ನಾಡಿನ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುವ ಮೂಲಕ ಕರ್ಮಭೂಮಿಯ ಋಣವನ್ನು ಪೊ›. ಸಿ.ವಿ. ಕೆರಿಮನಿಯವರು ತಿರಿಸಿ ಜನಮಾನಸದಲ್ಲಿ ಅಜರಾಮರವಾಗಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.
ಶನಿವಾರ ಸಂಜೆ ಪಟ್ಟಣದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಮತ್ತು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ, ಕಾರ್ಯನಿರತ ಪತ್ರಕರ್ತರ ಸಂಘ ಸೇರಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸಾಹಿತಿ ಪೊ›. ಸಿ.ವಿ ಕೆರಿಮನಿ ಅವರ ಶ್ರದ್ಧಾಂಜಲಿ, ಭಾವಾಂಜಲಿ ಕಾರ್ಯಕ್ರಮದಲ್ಲಿಅ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಯಲಕ್ಷ್ಮೀ ಗಡ್ಡದೇವರಮಠ ಮಾತನಾಡಿ, ಹುಟ್ಟು ಆಕಸ್ಮಿಕ ಸಾವು ನಿಶ್ಚಿತ. ಈ ನಡುವಿನ ಬದುಕಲ್ಲಿ ಸಮಾಜ ಸ್ಮರಿಸುವ ಸೇವೆ ಮಾಡಿ ನಮ್ಮ ಬದುಕನ್ನು ಸಾರ್ಥಕಗೊಳಿಸೋಣ ಎಂದರು.
ನಿವೃತ್ತ ಪಾಚಾರ್ಯ ಎಸ್.ಎಫ್. ಶಿಗ್ಲಿ, ಡಿ.ಬಿ. ಬಳಿಗಾರ, ಡಾ. ಜಯಶ್ರೀ ಹೊಸಮನಿ, ಪಿ.ಬಿ. ಖರಾಟೆ, ಕೆ.ಎಸ್. ಕೊಡ್ಲಿವಾಡ, ಡಾ. ರಾಜೇಂದ್ರ ಗಡಾದ, ರಮೇಶ ನವಲೆ, ಬಿ.ಎಸ್. ಬಾಳೇಶ್ವರಮಠ, ಮಹಾನಂದ ಕೊಣ್ಣೂರ, ಮಹೇಶ ಹೊಗೆಸೊಪ್ಪಿನ ನುಡಿನಮನ ಸಲ್ಲಿಸಿದರು. ಮಹಾದೇವಪ್ಪ ಕೊತ್ತಲ, ಸಿ.ಜೆ. ಹಿರೇಮಠ, ನಿರ್ಮಲಾ ಅರಳಿ, ಅಶ್ವಿನಿ ಅಂಕಲಕೋಟಿ, ಅನ್ನಪೂರ್ಣ ಓದುನವರ, ಕೆರಿಮನಿ ಕುಟುಂಬ, ಸಾಹಿತ್ಯ ಬಳಗ, ಶಿಷ್ಯ ಬಳಗ ಪಾಲ್ಗೊಂಡಿದ್ದರು.
ಕಸಾಪ ತಾಲೂಕು ಅಧ್ಯಕ್ಷ ಈಶ್ವರ ಮೆಡ್ಲೇರಿ, ಎಂ.ಎಸ. ಚಾಕಲಬ್ಬಿ, ಎಸ್.ಬಿ. ಅಣ್ಣಿಗೇರಿ, ನಾಗರಾಜ ಮಜ್ಜಿಗುಡ್ಡದ ನಿರ್ವಹಿಸಿದರು.