ನಿರ್ಮಾಪಕಿ ಏಕ್ತಾ ಕಪೂರ್ ದೇವಸ್ಥಾನಗಳಿಗೆ ಭೇಟಿ

yektha kapoor
ಏಕ್ತಾ ಕಪೂರ್
Published on

ಮಂಗಳೂರು: ನಿರ್ಮಾಪಕಿ, ಬಾಲಾಜಿ ಟೆಲಿಪಿಲ್ಮ್‌ನ ಮಾಲಕಿ, ಪದ್ಮಶ್ರೀ ಪುರಸ್ಕೃತ ಏಕ್ತಾ ಕಪೂರ್ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಶಿಬರೂರು ಶ್ರೀ ಕೊಡಮಣಿತ್ತಾಯ ದೈವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಕಟೀಲು ದೇವಳದ ವತಿಯಿಂದ ಕಮಲಾದೇವಿ ಪ್ರಸಾದ ಆಸ್ರಣ್ಣ ದೇವರ ಶೇಷ ವಸ್ತ್ರ ನೀಡಿ ಗೌರವಿಸಿದರು. ಶಿಬರೂರು ದೈವಸ್ಥಾನದಲ್ಲಿ ಉಮೇಶ್ ಗುತ್ತಿನಾರ್ ಮಾಹಿತಿ ನೀಡಿದರು. ರವಿ ಕೋಟ್ಯಾನ್ ಶಿಬರೂರು, ಏಕ್ತಾ ಕಪೂರ್ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net