ಹಸೇನ್-ಹುಸೇನ್ ದೇವರ ಮೆರವಣಿಗೆ

ಹಸೇನ್-ಹುಸೇನ್ ದೇವರ ಮೆರವಣಿಗೆ
Published on

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಬಾಣಾವರ ನಗರದ ಪೇಟೆ ಬಡಾವಣೆಯಲ್ಲಿ ಮೊಹರಂ ಹಿನ್ನೆಲೆ ಮುಸ್ಲಿಂ ಸಮುದಾಯದ ಹಸೇನ್-ಹುಸೇನ್ ದೇವರ ಮೆರವಣಿಗೆ ಬುಧವಾರ ಅದ್ದೂರಿಯಾಗಿ ನೆರವೇರಿತು.

9 ದಿನ ವಿಶೇಷ ಪೂಜೆ ಸಲ್ಲಿಸಿ, 10ನೇ ದೇವರನ್ನು ಹೊತ್ತು ಕೆಂಡವನ್ನು ತುಳಿಯುವ ಮೂಲಕ ಹಬ್ಬ ಆಚರಿಸಲಾಯಿತು. ಕೆಂಡ ಹಾಯುವ ಮೊದಲು ಕಷ್ಟ ಪರಿಹರಿಸುವಂತೆ ಹರಕೆ ಹೊರಲಾಯಿತು. ಕೆಂಡದ ಗುಂಡಿಗೆ ಮೆಣಸು, ಉಪ್ಪು ಸುರಿದು ಹರಕೆ ತೀರಿಸಲಾಯಿತು. ಬಡಾವಣೆಯ ಪ್ರಮುಖ ಬೀದಿಗಳಲ್ಲಿ ದೇವರನ್ನು ಮೆರವಣಿಗೆ ಮಾಡಿ, ಪೇಟೆ ಮಸೀದಿಯಲ್ಲಿ ದೇವರನ್ನು ವಿಸರ್ಜಿಸಲಾಯಿತು.

ಮೊಹರಂ ಆಚರಣೆ ಸಮಿತಿ ಅಧ್ಯಕ್ಷ ಫಾಸಿಲ್, ಇಲಿಯಾಸ್, ವಜೀರ್, ಬಾಬು, ತಶು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net