

ಸುಳ್ಯ: ಮತಗಳ್ಳತನ ಆರೋಪಿಸಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಪಂಜಿನ ಮೆರವಣಿಗೆ ಹಾಗೂ ಪ್ರತಿಭಟನಾ ಸಭೆ ಶನಿವಾರ ರಾತ್ರಿ ಸುಳ್ಯ ನಗರದಲ್ಲಿ ನಡೆಯಿತು.
ಕಾಂಗ್ರೆಸ್ ವಕ್ತಾರ ಎಂ.ಜಿ.ಹೆಗಡೆ ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಡಿಸಿಸಿ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು, ಪ್ರಮುಖರಾದ ಎಂ.ವೆಂಕಪ್ಪ ಗೌಡ, ಪಿ.ಎಸ್.ಗಂಗಾಧರ, ಸರಸ್ವತಿ ಕಾಮತ್, ಕೆ.ಎಂ.ಮುಸ್ತಫ, ಕೆ.ಪಿ.ಜಾನಿ, ಸಚಿನ್ ರಾಜ್ ಶೆಟ್ಟಿ, ಶರೀಫ್ ಕಂಠಿ, ಶಾಫಿ ಕುತ್ತಮೊಟ್ಟೆ, ಶಾಹುಲ್ ಹಮೀದ್ ಕುತ್ತಮೊಟ್ಟೆ, ರಾಜು ಪಂಡಿತ್, ಧೀರಾ ಕ್ರಾಸ್ತಾ, ಗೋಕುಲ್ ದಾಸ್ ಕೆ., ಭವಾನಿಶಂಕರ ಕಲ್ಮಡ್ಕ, ಸುರೇಶ್ ಅಮೈ, ಸತ್ಯಕುಮಾರ್ ಆಡಿಂಜ, ಪ್ರಸಾದ್ ರೈ ಮೇನಾಲ, ಪವನ್ ಮುಂಡ್ರಜೆ, ಸಿದ್ದಿಕ್ ಕೊಕ್ಕೊ, ಶ್ರೀಹರಿ ಕುಕ್ಕುಡೇಲು, ವಿಜೇಶ್ ಹಿರಿಯಡ್ಕ, ಲಕ್ಷ್ಮೀಶ ಗಬ್ಬಲಡ್ಕ , ಇಸ್ಮಾಯಿಲ್ ಪಡ್ಪಿನಂಗಡಿ, ಧೀರಾ ಕ್ರಾಸ್ತ, ಜಯಪ್ರಕಾಶ್ ನೆಕ್ರಪ್ಪಾಡಿ, ಮಹೇಶ್ ಬೇಳ್ಳಾರ್ಕರ್, ಮಂಜುನಾಥ್ ಮಡ್ತಿಲ, ಧನುಶ್ ಕುಕ್ಕೇಟಿ, ಮನ್ಸೂರ್ ಮೆಟ್ರೋ ಮತ್ತಿತರರಿದ್ದರು. ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಸ್ವಾಗತಿಸಿದರು. ಶಶಿಧರ ಎಂ.ಜೆ ನಿರೂಪಿಸಿದರು. ರಂಜಿತ್ ರೈ ಮೇನಾಲ ವಂದಿಸಿದರು.