ಗಣೇಶ ವಿಸರ್ಜನೆಗೂ ನೂರೆಂಟು ವಿಘ್ನ ಶಾಸಕರ ವಿರುದ್ಧ ಪ್ರತಿಭಟನೆ

PHOTO-2024-09-09-12-32-09
Published on

ರಾಮನಗರ : ಗಣೇಶ ವಿಸರ್ಜನಾ ಮೆರಣಿಗೆಗೆ ಪೋಲೀಸರು ಅಡ್ಡಿ ಪಡಿಸುತ್ತಿದ್ದಾರೆಂದು ಸೋಮವಾರ ರಾಮನಗರದ ಸಾರ್ವಜನಿಕ ಗಣೇಶೋತ್ಸವ ಆಚರಣಾ ಸಮಿತಿಗಳ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳ ಕಛೇರಿ ಮುಂದೆ ಪೊಲೀಸರು ಹಾಗೂ ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.

ಸಂಘಟನೆ ಮುಖಂಡ ಅನಿಲ್ ಮಾತನಾಡಿ ಸ್ವಾತಂತ್ರö್ಯಪೂರ್ವದಲ್ಲಿ ಬಾಲಗಂಗಾಧರ ತಿಲಕರು ಹಿಂದೂಗಳನ್ನು ಒಗ್ಗೂಡಿಸುವ ಸಲುವಾಗಿ ಸಾರ್ವಜನಿಕ ಗಣೇಶೋತ್ಸವ  ಆಚರಣೆಗೆ ತಂದರು. ಅಂದಿನಿಂದಲೂ ರಾಮನಗರದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ತನ್ನದೆ ಆದ ಇತಿಹಾಸ ಇದೆೆ. ಮನೆಯ ಹಬ್ಬಕ್ಕೆ ಸೀಮಿತವಾಗಿದ್ದ ಉತ್ಸವನ್ನು ಸಾರ್ವಜನಿಕಗೊಳಿಸಿ ಯುವಕರಲ್ಲಿ ದೇಶಾಭಿಮಾನ ಬೆಳೆಸುವಲ್ಲಿ ಹಿರಿಯರು ಕಾರಣಕರ್ತರಾಗಿದ್ದಾರೆ.

ರಾಮನಗರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಿಸುತ್ತಾ ಬರಲಾಗಿದೆ. ಇಂದು ಗಣೇಶೋತ್ಸವ ಸಮಿತಿಗಳು ಯುವಕರಲ್ಲಿ ಧಾರ್ಮಿಕ ಮನೋಭಾವನೆ ಒಗ್ಗಟ್ಟನ್ನು ಬೆಳೆಸುತ್ತಿದೆ. ಆದರೆ, ಪ್ರಸ್ತುತ ಗಣೇಶೋತ್ಸವ ಆಚರಣೆ ಮಾಡಲು ಮಂಡಳಿಗಳು ಹಿಂದುಮುAದು ನೋಡಬೇಕಾದ ಸ್ಥಿತಿ ಎದುರಾಗಿದೆ ಎಂದು ಪೊಲೀಸರ ವಿರುದ್ಧ ಕಿಡಿ ಕಾರಿದರು.

ಗಣೇಶ ಹಬ್ಬಕ್ಕೆ ಸಂಬAಧಿಸಿದAತೆ ಕಳೆದ ವಾರ ಪೊಲೀಸ್ ಇಲಾಖೆ ವತಿಯಿಂದ ನಡೆದ ಶಾಂತಿ ಸಭೆಯಲ್ಲಿ ಗಣೇಶೋತ್ಸವ ಆಚರಣೆಗೆ ಮಾಡಲು ಹಾಕಿರುವ ಷರತ್ತುಗಳು ಉತ್ಸವ ಆಚರಣೆ ಮಾಡದಂತೆ ತಡೆಯುವಂತಿದೆ. ಇದರ ಜತೆಗೆ, ಆಚರಣೆ ಕುರಿತು ಬಾಂಡ್ ಪೇಪರ್‌ನಲ್ಲಿ ಬರೆದುಕೊಡಬೇಕು. ಸಮಾಜಘಾತಕರು ಹಾಗೂ ರೌಡಿಗಳಿಗೆ ಬಳಿ ಪೊಲೀಸ್ ಇಲಾಖೆ ಬಾಂಡ್ ಪೇಪರ್ ಬರೆಸಿಕೊಳ್ಳದೆ, ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಮಂಡಳಿಗಳಿಂದ ಬಾಂಡ್‌ಪೇಪರ್ ಬರೆಸಿಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜದ ಸಾಮರಸ್ಯ ಸಾರುವ ಗಣೇಶೋಸವನ್ನು ಬಾಂಡ್ ಪೇಪರ್ ನೀಡಿ ಆಚರಣೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಸಾಮರಸ್ಯಕ್ಕೆ ಹೆಸರಾಗಿರುವ ರಾಮನಗರ ಜಿಲ್ಲೆಯು ಈದ್ ಮಿಲಾದ್ ಹಬ್ಬ ಇದೆ ಎಂಬ ಕಾರಣಕ್ಕೆ ಮೂರು ದಿನಗಳ ಗಣೇಶೋತ್ಸವ ಶೋಭಾಯಾತ್ರೆಯನ್ನು ತಡೆಯಲಾಗುತ್ತಿದೆ. ಎಲ್ಲಾ ಧರ್ಮದವರು ಸಹೋದರ ರೀತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಈ ನಡುವೆ ಜಿಲ್ಲಾಡಳಿತ ಪೋಲೀಸ್ ಇಲಾಖೆ ಧರ್ಮ ಧರ್ಮಗಳ ವಿರುದ್ಧ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ.

ಯಾವುದೇ ಆಧಾರ ಇಲ್ಲದೆ ಪೊಲೀಸ್ ಇಲಾಖೆ ಸ್ವಇಚ್ಛೆಯಿಂದ ಈದ್ ಮಿಲಾದ್ ಹಬ್ಬದ ಮೂರು ದಿನ ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆ ನಿಷೇಧಿಸಿದೆ. ಆಮೂಲಕ ಜಿಲ್ಲಾಡಳಿತ ತುಘಲಕ್ ಆಡಳಿತ ನಡೆಸುತ್ತಿದೆ ಎಂದು ಕಿಡಿಕಾರಿ ಕೂಡಲೇ ಪೋಲೀಸ್ ಇಲಾಖೆ ಯಾವುದೇ ಷರತ್ತು ಇಲ್ಲದೆ ಗಣೇಶ ಉತ್ಸವ ಆಚರಣೆಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಗಣೇಶ ಆಚರಣಾ ಸಮಿತಿ ಒಕ್ಕೂಟದ ಪದಾಧಿಕಾರಿಗಳಾದ ನಂದೀಶ್, ನಾಗೇಶ್, ಚಂದ್ರಶೇಖರ ರೆಡ್ಡಿ, ಚನ್ನಪ್ಪ, ಕಾಳಯ್ಯ, ಗೂಳಿಕುಮಾರ್, ಜ್ಞಾನೇಶ್, ಸುಹಾಸ್, ರಘು, ಕಿಶನ್, ವಾಸು, ಬಸವರಾಜ್, ಭದ್ರಿನಾಥ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net