

ಬೆಂಗಳೂರು: 2024ರ ಲೋಕಸಭೆ ಚುನಾವಣೆಯ್ಲಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಮಣಿಸಲು ಒಟ್ಟಾಗಿರುವ ಸಮಾನ ಮನಸ್ಕ ವಿರೋಧ ಪಕ್ಷಗಳು ಜುಲೈ 17-18ರಂದು ಬೆಂಗಳೂರಿನಲ್ಲಿ ಸಭೆ ನಡೆಸಲಿವೆ.
ಇನ್ನು ವಿರೋಧ ಪಕ್ಷದ ನಾಯಕರ ಸ್ವಾಗತಕ್ಕೆ ನಗರದ ತುಂಬೆಲ್ಲಾ ಬ್ಯಾನರ್ಗಳನ್ನು ಹಾಕಲಾಗಿದ್ದು, ಇದನ್ನು ಕನ್ನಡ ಪರ ಸಂಘಟನೆಯ ಸದಸ್ಯರುಗಳು ಹರಿದು ಹಾಕಿದ್ದಾರೆ.
ವಿರೋಧ ಪಕ್ಷದ ನಾಯಕರ ಸ್ವಾಗತಕ್ಕೆ ಹಾಕಲಾಗಿದ್ದ್ ಬ್ಯಾನರ್ಗಳಲ್ಲಿ ಕನ್ನಡವನ್ನು ಬಳಸದೆ ಇಂಗ್ಲೀಷ್ ಬಳಸಲಾಗಿದೆ. ಕನ್ನಡ ಬಳಸದಿದ್ದರೆ ಮಸಿ ಬಳಿಯುವುದಾಗಿ ಸಂಘಟನೆಯ ಸದಸ್ಯರು ಎಚ್ಚರಿಕೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.