ಅಂದು ರೈತಪರ, ಇಂದು ವಿರೋಧಿ

Published on

ಚಿಕ್ಕಬಳ್ಳಾಪುರ: ರೈತ ವಿರೋಧಿ, ಅವೈಜ್ಞಾನಿಕ, ಬಲವಂತದ ಕೃಷಿ ಭೂಮಿ ಸ್ವಾಧಿನ ವಿರೋಧಿಸಿ ಜೂ.25ರಂದು ಕೈಗೊಂಡಿರುವ ದೇವನಹಳ್ಳಿ ಚಲೋ ಹೋರಾಟಕ್ಕೆ ವಿವಿಧ ಸಂಘ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ.

ಕರ್ನಾಟಕ ಪ್ರಾಂತ ರೈತ ಸಂ, ಕರ್ನಾಟಕ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ), ಶಾಶ್ವತ ನೀರಾವರಿ ಹೋರಾಟ ಸಮಿತಿ ಸೇರಿ ರೈತಪರ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಲು ಕರೆ ನೀಡಿದ್ದಾರೆ.

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಹಳ್ಳಿಗಳಲ್ಲಿನ 1777.02 ಎಕರೆ ಕೃಷಿ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಸ್ವಾಧಿನಪಡಿಸಿಕೊಳ್ಳಲು ಮುಂದಾಗಿದೆ. ಹಿಂದೆ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ರೈತರಿಗೆ ನೋಟಿಸ್​ ನೀಡಿದಾಗ ಹೋರಾಟ ನಡೆಸಲಾಗಿತ್ತು. ಇದೇ ವೇಳೆ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಬೆಂಬಲ ಸೂಚಿಸಿದ್ದರು. ಆದರೆ, ಇದೀಗ ಅಧಿಕಾರಕ್ಕೆ ಬಂದ ಬಳಿಕ ಧೋರಣೆ ಬದಲಾಯಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈಗಾಗಲೇ ಬಲವಂತದ ಭೂಸ್ವಾಧಿನವನ್ನು ವಿರೋಧಿಸಿ ರೈತರು ನಡೆಸುತ್ತಿರುವ ಅರ್ನಿದಿಷ್ಟಾವಧಿ ಹೋರಾಟವು 1080 ದಿನ ಪೂರೈಸಿದೆ. ಆದರೂ ಸರ್ಕಾರ ಕಿವಿಗೊಡದಿರುವುದು ರೈತ ವಿರೋಧಿ ಧೋರಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಗಳಿಗೆ ಕೈಗಾರಿಕೆಗಳ ಸ್ಥಾಪನೆಗೆ ಬಂಜರು ಭೂಮಿಯನ್ನು ಬಿಟ್ಟು ಲವತ್ತಾದ ಕೃಷಿ ಜಮೀನು ನೀಡಬೇಕು. ರೈತರನ್ನು ಒಕ್ಕಲೆಬ್ಬಿಸಿ ಕೃಷಿ ಮಾರಕವಾಗುವ ನೀತಿಗಳನ್ನು ರೂಪಿಸುವ ಧೋರಣೆ ಖಂಡನೀಯ. ಇದಕ್ಕೆ ದೇವನಹಳ್ಳಿ ಚಲೋ ಹೋರಾಟವನ್ನು ಯಶಸ್ವಿಗೊಳಿಸುವ ಮೂಲಕ ಸರ್ಕಾರಕ್ಕೆ ಪಾಠ ಕಲಿಸಬೇಕಾಗಿದೆ. > ಲಕ್ಷ್ಮೀನಾರಾಯಣ್​, ರೈತ ಸಂದ ಜಿಲ್ಲಾಧ್ಯಕ್ಷ, ಚಿಕ್ಕಬಳ್ಳಾಪುರ ದೇವನಹಳ್ಳಿ ಚಲೋ ಹೋರಾಟಕ್ಕೆ ಬಂದು ರೈತರ ಪರ ಮಾತನಾಡಿದ್ದ ಸಿದ್ದರಾಮಯ್ಯ ಈಗ ವರಸೆ ಬದಲಾಯಿಸಿದ್ದಾರೆ. ಉದ್ಯೋಗಾವಕಾಶ ಸೃಷ್ಟಿಗೆ ಕೈಗಾರಿಕಾ ಅಭಿವೃದ್ಧಿ ಭೂ ಸ್ವಾಧಿನ ಬೇಡವಾ ಎಂದು ಪ್ರಶ್ನಿಸುತ್ತಿದ್ದಾರೆ. ಪ್ರಗತಿಪರ ಕೃಷಿಯಿಂದಲೇ ಸರ್ವಾಂಗೀಣ ಪ್ರಗತಿ, ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ ಸಾಧ್ಯವಾಗುತ್ತದೆ ಎಂಬ ಪರಿಜ್ಞಾನ ಇಲ್ಲ. > ಜಿ.ಜಿ. ಹಳ್ಳಿ ನಾರಾಯಣಸ್ವಾಮಿ, ರೈತ ಸಂದ ಅಧ್ಯಕ್ಷ 1180 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಕಸಕ್ಕಿಂತಲೂ ಕಡೆಯಾಗಿ ನೋಡುತ್ತಿರುವ ಸರ್ಕಾರದ ಬೇಜವಾಬ್ದಾರಿ, ನಿರ್ಲಕ್ಷ್ಯ ಧೋರಣೆ ಖಂಡನೀಯ. ಇದಕ್ಕೆ ರೈತರ ಗಟ್ಟಿ ಧ್ವನಿಯನ್ನು ವಿಧಾನಸೌಧಕ್ಕೆ ಮುಟ್ಟಿಸಬೇಕಿದೆ. ನಿರ್ಣಾಯಕ ಹೋರಾಟದ ಬಲ ಪ್ರದರ್ಶನಗೊಳ್ಳಬೇಕಿದೆ. > ಎಂ.ಆರ್​.ಲಕ್ಷ್ಮೀನಾರಾಯಣ್​, ರೈತ ಮುಖಂಡ, ಚಿಕ್ಕಬಳ್ಳಾಪುರ ಸರ್ಕಾರಗಳು ಕೇವಲ ಅಧಿಕಾರಕ್ಕಾಗಿ ರೈತರ ಅಭಿವೃದ್ಧಿಯ ಮಂತ್ರ ಜಪಿಸುತ್ತವೆ. ಆದರೆ, ಹಿತವನ್ನು ಕಾಪಾಡುವುದಿಲ್ಲ. ಲವತ್ತಾದ ಕೃಷಿ ಜಮೀನು ಸ್ವಾಧಿನ ಕೈ ಬಿಡುವುದು, ಮಾರಕ ಕಾಯ್ದೆಗಳ ಹಿಂಪಡೆಯುವುದು, ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವುದು, ಬೆಲೆ ಕುಸಿತದ ಕೃಷಿ ಬೆಳೆಗಳಿಗೆ ನ್ಯಾಯಯುತ ಬೆಂಬಲ ಘೋಷಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು. > ಸುಷ್ಮಾ ಶ್ರೀನಿವಾಸ್​, ಜಿಲ್ಲಾಧ್ಯೆ, ರೈತ ಮಹಿಳಾ ಸಂ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net