ಬಂಟಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ

blm (4)
Published on

ಶಿರ್ವ: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗದ 2ನೇ ವರ್ಷದ ವಿದ್ಯಾರ್ಥಿಗಳಾದ ಹಿತೇಶ್ ಎ., ಯತಿಕಾ ಪಿ.ಅಮೀನ್, ಶಮಾ ಪಟವರ್ಧನ್ ಅವರು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಹ್ಯಾಕ್‌ಸ್ಕೈ ಪ್ಯಾನ್ ಇಂಡಿಯಾ ಸೈಬರ್ ಸೆಕ್ಯುರಿಟಿ ಹ್ಯಾಕಥಾನ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಸೈಬರ್ ಬೆದರಿಕೆ, ತಪ್ಪು ಮಾಹಿತಿ, ಆಳವಾದ ಪತ್ತೆ ಸೇರಿದಂತೆ ಸಮಕಾಲೀನ ಡಿಜಿಟಲ್ ಭದ್ರತಾ ಸವಾಲುಗಳಿಗೆ ಅತ್ಯಾಧುನಿಕ ಪರಿಹಾರಗಳನ್ನು ಅಭಿವೃದ್ಧಿ ಪಡಿಸಲು ಈ ಸ್ಪರ್ಧೆ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net