

ಹರಿಪ್ರಸಾದ್ ನಂದಳಿಕೆ ಶಿರ್ವ ಗ್ರಾಮಸಭೆಗಳಲ್ಲಿ ಬೆರಳೆಣಿಕೆಯಷ್ಟೇ ಊರಿನ ಗ್ರಾಮಸ್ಥರು ಭಾಗವಹಿಸುತ್ತಾರೆ. ಕೆಲವು ಕಡೆಗಳಲ್ಲಿ ಕಾಟಾಚಾರಕ್ಕೆ ಗ್ರಾಮಸಭೆಗಳು ನಡೆಯುತ್ತವೆ. ಆದರೆ ಶಿರ್ವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ವಾರ್ಡ್ ಸಭೆ ಉಡುಪಿ ಜಿಲ್ಲೆಯಲ್ಲಿಯೇ ವಾದರಿ ವಾರ್ಡ್ ಸಭೆಯಾಗಿ ಗಮನ ಸೆಳೆದಿದೆ. ಗ್ರಾಮಸಭೆಯ ಪೂರ್ವಭಾವಿಯಾಗಿ ನಡೆಯುವ ವಾರ್ಡ್ ಸಭೆಗಳು ಕಾಟಾಚಾರಕ್ಕೆ ನಡೆಯುತ್ತವೆ. ಈ ಸಭೆಗೆ ವಾರ್ಡ್ ಪ್ರತಿನಿಧಿಗಳೇ ಗೈರಾಗುತ್ತಾರೆ. ಕೆಲವೇ ಕೆಲ ಅಧಿಕಾರಿಗಳು ಭಾಗವಹಿಸಿ ಮಾಹಿತಿ ನೀಡುತ್ತಾರೆ. ಆದರೆ ಇತ್ತೀಚೆಗೆ ನಡೆದ ಶಿರ್ವದ ವಾರ್ಡ್ 1 ಮತ್ತು 19ರ ಬಂಟಕಲ್ಲು ವಾರ್ಡ್ ಸಭೆಯಲ್ಲಿ ಗ್ರಾಮಸಭೆಯಲ್ಲಿ ಸೇರುವುದಕ್ಕಿಂತ ಹೆಚ್ಚಿನ ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿದೆ. ಗ್ರಾಮಸ್ಥರ ಸಮಸ್ಯೆ ಸೇರಿದಂತೆ ಹತ್ತು ಹಲವು ಪ್ರಯೋಜನಗಳನ್ನು ಗ್ರಾಮಸ್ಥರಿಗೆ ತಲುಪಿಸುವಲ್ಲಿ ವಾರ್ಡ್ ಹಾಗೂ ಗ್ರಾಮಸಭೆಗಳು ವೇದಿಕೆಯಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಮಸಭೆಗಳಲ್ಲಿ ಗ್ರಾಮಸ್ಥರು ಪಾಲ್ಗೊಳ್ಳುವುದು ಅಪರೂಪವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಒಂದು ವಾರ್ಡ್ ಸಭೆಯಲ್ಲಿ ಇಷ್ಟೊಂದು ಗ್ರಾಮಸ್ಥರು ಸೇರಿರುವುದು ನಿಜಕ್ಕೂ ಅಚ್ಚರಿಯಾಗಿದೆ. ಅಲ್ಲದೇ ಇದು ಇತರ ಗ್ರಾಮಗಳಿಗೂ ವಾದರಿಯಾಗಿದೆ.
ವಾರ್ಡ್‌ನ ಎಲ್ಲ ಭಾಗಗಳಲ್ಲಿ ಪ್ರಚಾರ ಬ್ಯಾನರ್‌ಗಳು, ಪ್ರತಿ ಮನೆಯ ಮತದಾರದೊಂದಿಗೆ ವೈಯಕ್ತಿಕ ಸಂಪರ್ಕ, ಮೊಬೈಲ್ ಸಂದೇಶ, ವಾರ್ಡ್‌ನ ಪ್ರತಿ ಮನೆಗಳೊಂದಿಗೆ ಸಹಾಯವಾಣಿ ವ್ಯವಸ್ಥೆ ಮೂಲಕ ಪಂಚಾಯಿತಿ ಸೇವೆಗಳನ್ನು ನೀಡಿದ ಈ ಭಾಗದ ವಾರ್ಡ್ ಸದಸ್ಯರು ತಮ್ಮ ವಾರ್ಡಿನ ಸಭೆಯನ್ನು ವಿಶೇಷವಾಗಿ ಆಯೋಜಿಸಲು ನಿರ್ಧರಿಸಿದರು. ಪರಿಸರದ ಎಸ್‌ಎಸ್‌ಎಲ್‌ಸಿ/ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ವಾರ್ಡ್‌ನ ಸಾಧಕರಿಗೆ ಸನ್ಮಾನ, ಸಭೆಯಲ್ಲಿ ಭಾಗವಹಿಸಿದ ಪ್ರತಿನಿಧಿಗಳಿಗೆ ಬಹುವಾನ ವ್ಯವಸ್ಥೆ ಹೀಗೆ ಹಲವಾರು ರೀತಿಯಲ್ಲಿ ಗ್ರಾಮಸ್ಥರನ್ನು ಸೆಳೆದಿದ್ದಾರೆ. ಗ್ರಾಮಸ್ಥರ ಜೊತೆಗೆ ನಿರಂತರ ಸಂಪರ್ಕದ ಫಲವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರನ್ನು ಒಂದು ವಾರ್ಡ್ ಸಭೆಯಲ್ಲಿ ಸೇರಿಸುವಲ್ಲಿ ಸದಸ್ಯರ ಪ್ರಯತ್ನ ಯಶಸ್ವಿಯಾಗಿದೆ.
ವಾರ್ಡಿನ ಪ್ರತಿ ಮನೆಗೂ ಸಭೆಯ ಬಗ್ಗೆ ವಾಹಿತಿ ನೀಡಲಾಗುತ್ತದೆ ಹಾಗೂ ನಿರಂತರ ಸಂಪರ್ಕದಲ್ಲಿದ್ದು ಪಂಚಾಯಿತಿನಿಂದ ಸಿಗುವ ಸವಲತ್ತುಗಳ ವಾಹಿತಿ ನೀಡುತ್ತೇವೆ. ಜನಸ್ನೇಹಿ ಸೇವೆ ನೀಡಿದ ಪರಿಣಾಮ ಇಷ್ಟೊಂದು ಪ್ರವಾಣದ ಜನ ಸೇರಲು ಸಾಧ್ಯವಾಗಿದೆ. -ಕೆ.ಆರ್.ಪಾಟ್ಕರ್, ವಾರ್ಡ್ ಪ್ರತಿನಿಧಿ. ಇಲ್ಲಿನ ಚುನಾಯಿತ ಪಂಚಾಯಿತಿ ಪ್ರತಿನಿಧಿಗಳ ಜನಸೇವೆಯಿಂದ ಇಷ್ಟೊಂದು ಪ್ರವಾಣದ ಜನ ಸೇರಲು ಸಾಧ್ಯವಾಗಿದೆ. ಈ ವಾರ್ಡಿನ ಸಭೆಯಲ್ಲಿ ಗ್ರಾಮಸಭೆಯನ್ನು ಮೀರುವಂತೆ ಜನ ಸೇರುವುದೇ ವಿಶೇಷವಾಗಿದೆ. ಇದು ಇತರರಿಗೂ ವಾದರಿಯಾಗಿದೆ. -ಅನಂತಪದ್ಮನಾಭ ನಾಯಕ್, ಶಿರ್ವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ