

ಹೆಬ್ರಿ: ಗಿಡ ಬೆಳೆಸುವುದರೊಂದಿಗೆ ಅದರ ಪಾಲನೆ ಪೋಷಣೆಯೂ ನಮ್ಮ ಮಹತ್ತರ ಜವಾಬ್ದಾರಿ ಹೆಬ್ರಿ ಶ್ರೀ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಭಾರ್ಗವಿ ಆರ್.ಐತಾಳ್ ಹೇಳಿದರು.
ಶಾಂತಿನಿಕೇತನ ಯುವವೃಂದ ಕುಡಿಬೈಲ್ ಕುಚ್ಚೂರು, ಶ್ರೀ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಹೆಬ್ರಿ, ವಿಜಯವಾಣಿ ಸಹಯೋಗದೊಂದಿಗೆ ಎರಡನೇ ವರ್ಷದ ವನಮಹೋತ್ಸವ ಕಾರ್ಯಕ್ರಮದ ಉತ್ತಮ ಗಿಡ ನೆಟ್ಟು ಬೆಳೆಸಿದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂಡೆಜೇಡ್ಡಿನ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಶಿಕ್ಷಕಿ ಯಶೋದಾ, ಶಾಂತಿನಿಕೇತನ ಯುವವೃಂದದ ಉಪಾಧ್ಯಕ್ಷ ಜಯಕರ ಆಚಾರ್ಯ, ಕಾರ್ಯಕ್ರಮದ ಸಂಯೋಜಕ ನರೇಂದ್ರ ಎಸ್., ಆಡಳಿತ ಮಂಡಳಿ ಸದಸ್ಯ ಪ್ರಸನ್ನ ಬಸವಾನಿ, ಶ್ರೀ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಉಮೇಶ್ ಇದ್ದರು.
ವಿದ್ಯಾರ್ಥಿಗಳಿಗೆ ಗಿಡ ಮರಗಳನ್ನು ನೆಟ್ಟು ಅವುಗಳ ಬಗ್ಗೆ ಮನವರಿಕೆ ಮಾಡುವುದರೊಂದಿಗೆ, ಉತ್ತಮವಾಗಿ ಗಿಡ ಬೆಳೆಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿದಾಯಕವಾಗಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಿಜಕ್ಕೂ ಅಭಿನಂದನೆಯ. ಇದೊಂದು ಅದ್ಭುತ ಕಾರ್ಯಕ್ರಮ.-ಯಶೋದಾ ಶಿಕ್ಷಕಿ