

ಸಚಿವರ ಒತ್ತಡದಿಂದಲೇ ಮಣಿಕಂಠ ಬಂಧಿಸಿದ ಪೊಲೀಸರು ಬಿಜೆಪಿ ಕಲಬುರಗಿ ಗ್ರಾಮಾಂತರ ಜಿಲ್ಲಾ ಅದ್ಯಕ್ಷ ರದ್ದೇವಾಡಗಿ ಕಿಡಿ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿAದಲೂ ಕಲಬುರಗಿ ಜಿಲ್ಲೆ ಸೇರಿದಂತೆ ಹಲವು ಕಡೆಗಳಲ್ಲಿ ಬಿಜೆಪಿ ಕಾರ್ಯಕರ್ತರನ್ನು ಗುರಿಯನ್ನಾಗಿಸಿಕೊಂಡು ಟಾಗೇಟ್ ಮಾಡಿ ಟಾರ್ಚರ್ ಕೊಡುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಬರಲಾಗುತ್ತಿದೆ ಎಂದು ಬಿಜೆಪಿ ಗ್ರಾಮಾಂತರ ಜಿ¯್ಲÁಧ್ಯP್ಷÀ ಶಿವರಾಜ ಪಾಟೀಲ ರz್ದÉÃವಾಡಗಿ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿ¯್ಲÉಯಲ್ಲಿ ವಿನಾಕಾರಣ ಬಿಜೆಪಿಯವರಿಗೆ ಕಿರುಕುಳ ನೀಡಿ, ಅನ್ಯಾಯ ಮಾಡಲಾಗುತ್ತಿದೆ. ಬಿಜೆಪಿ ಮುಖಂಡ ಮಣಿಕಂಠ ರಾಠೋಡ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಕೇಸ್ ದಾಖಲಿಸಿ ಪೊಲೀಸ್ ಬಂಧಿಸಿ ಟಾರ್ಚರ್ ನೀಡಿದ್ದಾರೆ ಎಂದು ಕಿಡಿಕಾರಿದರು.
ಇದೆಲ್ಲದರ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕೈವಾಡ ಇದೆ. ಅವರೇ ಪೊಲೀಸರನ್ನು ಬಳಸಿಕೊಂಡು ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ರz್ದÉÃವಾಡಗಿ ಗಂಭೀರವಾಗಿ ಆರೋಪಿಸಿದರು. ಮಣಿಕಂಠ ಅವರು ಚಿತ್ತಾಪುರ ತಾಲೂಕಿನ ಗ್ರಾಮದಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ ಹೇಳಿಕೆಯನ್ನು ಆಧರಿಸಿ ಪ್ರಕರಣವನ್ನು ದಾಖಲಿಸಿ, ಪೊಲೀಸರು ಅಧಿಕಾರದ ದುರುಪಯೋಗ ಮಾಡಿಕೊಂಡಿದ್ದಾರೆ. ಉz್ದÉÃಶ ಪೂರ್ವಕವಾಗಿಯೇ ಜಾಮೀನು ರಹಿತ ಕಲಂಗಳನ್ನು ಹಾಕಿ ಬಂಧನ ಮಾಡಿದ್ದನ್ನು ಬಿಜೆಪಿ ಖಂಡಿಸುತ್ತೆ ಎಂದು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಚಾರಗಳನ್ನು ಹೇಳುವ ಸ್ವಾತಂತ್ರÈ ಎಲ್ಲರಿಗೂ ಇದೆ. ಅದರೆ, ಜಿ¯್ಲÁ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ರಾಜಕೀಯ ದುರುz್ದÉÃಶದಿಂದ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ವಿನಾ:ಕಾರಣ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಸೇರಿದಂತೆ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿz್ದÁರೆ ಎಂದು ರz್ದÉÃವಾಡಗಿ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ದ್ವೇಷದ ರಾಜಕಾರಣ ನಿಲ್ಲಿಸದೆ ಹೋದರೆ ಸರ್ಕಾರ ಮತ್ತು ಪ್ರಿಯಾಂಕ್ ವಿರುದ್ಧ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಅಮರನಾಥ ಪಾಟೀಲ, ಮುಖಂಡರಾದ ನೀಲಕಂಠ ಪಾಟೀಲ ಮೊದಲಾದವರಿದ್ದರು.