ಸರ್ವಾಧಿಕಾರಿ ಪ್ರಿಯಾಂಕ್ ರಾಜ್ಯದ 'ಸ್ಪೆಷಲ್ ಬೇಬಿ' : ಸಂಸದ ಡಾ.ಉಮೇಶ ಜಾಧವ್ ಲೇವಡಿ

ಕಲಬುರಗಿ ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕೆಡಿಪಿ ಸಭೆ ನಡೆಸಲ್ಲ, ಕೋರ್ಟ್ಗೆ ಹೋಗಿ ಎನ್ನುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ೪೦ ಸಭೆ ಮಾಡಿದ್ದೀನಿ ಎನ್ನುವ ಅವರಿಗೆ ಕನಿಷ್ಠ ಸ್ವಪಕ್ಷದ ಶಾಸಕರೇ ಜತೆಗಿಲ್ಲ ಎಂಬ ಅರಿವಿಲ್ಲ. ಎಲ್ಲದರಲ್ಲೂ ಹಸ್ತಕ್ಷೇಪ ಮಾಡುವ ರಾಜ್ಯದ ಏಕೈಕ ಸ್ಪೆಷಲ್ ಬೇಬಿ ಪ್ರಿಯಾಂಕ್ ಎಂದು ಸಂಸದ ಡಾ.ಉಮೇಶ ಜಾಧವ್ ವ್ಯಂಗ್ಯವಾಡಿದರು.
umesh jadhav
Published on

ಸರ್ವಾಧಿಕಾರಿ ಪ್ರಿಯಾಂಕ್ ರಾಜ್ಯದ ಸ್ಪೆಷಲ್ ಬೇಬಿ : ಸಂಸದ ಡಾ.ಉಮೇಶ ಜಾಧವ್ ಕಿಡಿ

ಜಗತ್ತಿಗೆ ತಿಳಿದಿದೆ ಗುರುಮಠಕಲ್ ಸ್ಥಿತಿ ಜಿಲ್ಲಾ ಉಸ್ತುವಾರಿ| ಸಚಿವರ ವಿರುದ್ಧ ಸಂಸದ ಡಾ.ಉಮೇಶ ವಾಗ್ದಾಳಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕೆಡಿಪಿ ಸಭೆ ನಡೆಸಲ್ಲ, ಕೋರ್ಟ್ಗೆ ಹೋಗಿ ಎನ್ನುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ೪೦ ಸಭೆ ಮಾಡಿದ್ದೀನಿ ಎನ್ನುವ ಅವರಿಗೆ ಕನಿಷ್ಠ ಸ್ವಪಕ್ಷದ ಶಾಸಕರೇ ಜತೆಗಿಲ್ಲ ಎಂಬ ಅರಿವಿಲ್ಲ. ಎಲ್ಲದರಲ್ಲೂ ಹಸ್ತಕ್ಷೇಪ ಮಾಡುವ ರಾಜ್ಯದ ಏಕೈಕ ಸ್ಪೆಷಲ್ ಬೇಬಿ ಪ್ರಿಯಾಂಕ್ ಎಂದು ಸಂಸದ ಡಾ.ಉಮೇಶ ಜಾಧವ್ ವ್ಯಂಗ್ಯವಾಡಿದರು.
ಫಿಲ್ಟರ್ ಬೆಡ್‌ನ ಆಶ್ರಯ ಕಾಲನಿಯಲ್ಲಿ ೪೦ ಕುಟುಂಬಗಳನ್ನು ಬೀದಿಗೆ ತಳ್ಳಲಾಗಿದೆ. ಸೌಜನ್ಯಕ್ಕೂ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾಗಿಲ್ಲ. ಆ ಸ್ಥಳದಲ್ಲಿ ಬಂಜಾರ ಸಮುದಾಯದವರು ಮಾತ್ರ ಇದ್ದಾರೆ ಎನ್ನುತ್ತಿದ್ದಾರೆ. ಅಲ್ಲಿ ಬಂಜಾರ, ಕೊಂಚ, ಕೊರಮ, ಹೆಳವ ಸೇರಿ ವಿವಿಧ ಜನಾಂಗದವರಿರುವ ಅರಿವು ಇಲ್ಲ. ಏಕೆಂದರೆ ಅವರು ಬೆಂಗಳೂರಿನಿAದ ಹೊರಗೆ ಬಂದಿಲ್ಲ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ ವಿದೇಶಕ್ಕೆ ಹೋಗುತ್ತಾರೆ ಎನ್ನುವಷ್ಟರ ಮಟ್ಟಕ್ಕೆ ಮಾತನಾಡುವ ಅವರಿಗೆ ಜವಳಿ ಪಾರ್ಕ್ಗೆ ಇರುವ ತೊಡಕುಗಳನ್ನು ದೂರ ಮಾಡಿ ಉದ್ಘಾಟಿಸಲು ಆಗುತ್ತಿಲ್ಲ. ಬೆಂಗಳೂರಿನಲ್ಲಿ ಮೆಡಿಕಲ್ ಕಾಲೇಜು, ಸಿಬಿಎಸ್‌ಇ ಶಾಲೆ ಕಟ್ಟುವ ಇವರಿಗೆ ಗುರುಮಠಕಲ್‌ನಲ್ಲಿ ಒಂದು ಸಿಬಿಎಸ್‌ಇ ಶಾಲೆ ಕಟ್ಟಲು ಆಗಲಿಲ್ಲ. ಬೆಂಗಳೂರಿನಲ್ಲಿ ಇರುವವರಿಗೆ ಇದೆಲ್ಲ ಹೇಗೆ ತಿಳಿಯಬೇಕು ಎಂದು ಛೇಡಿಸಿದರು.
ಜಿಲ್ಲೆಯಲ್ಲಿ ಕೆಡಿಪಿ, ದಿಶಾ ಸಭೆ ೨೦ ತಿಂಗಳಿAದ ನಡೆದಿಲ್ಲ. ೨೭ರಂದು ಮತ್ತೆ ಮುಂದೆ ಓಡಿಸುತ್ತೀದ್ದೀರಿ. ಚೇಲಾಗಳನ್ನು ಖುಷಿಪಡಿಸಲು ಚಿಂಚೋಳಿಯಲ್ಲಿ ಜನಸ್ಪಂದನ ಮಾಡಿದ್ದಾರೆ. ನರೇಗಾ ಹಣ ಬಿಡುಗಡೆ ಬಗ್ಗೆ ಮಾತನಾಡುವ ನೈತಿಕತೆ ಪ್ರಿಯಾಂಕ್‌ಗಿಲ್ಲ. ರಾಷ್ಟಿçÃಯ ಪಕ್ಷದ ಅಧ್ಯಕ್ಷರ ಮಗನಾಗಿ, ಸಚಿವನಾಗಿದ್ದರೂ ವ್ಯವಸ್ಥೆಯ ಅರಿವಿಲ್ಲ. ನರೇಗಾ ಅನುದಾನ ಬೇಡಿಕೆಗೆ ತಕ್ಕಂತೆ ಕೊಡುತ್ತಾರೆ. ನೀವು ಬೇಡದೆ ಬರೀ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರೆ ಆಗಲ್ಲ. ಅದಕ್ಕೊಂದು ನಿಯಮ ಇರುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net