ಡಾ.ಶರಣಪ್ರಕಾಶ ರಾಜೀನಾಮೆ ನೀಡಬೇಕಿಲ್ಲ ಎಂದ ಪ್ರಿಯಾಂಕ್​​

priyankh
Published on

ಕಲಬುರಗಿ: ಚಿಂಚೋಳಿ ತಾಲೂಕಿನ ಶಿರೊಳ್ಳಿ ಗ್ರಾಮದ ಶಿವಕುಮಾರ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಸಾವಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಕಾರಣ ಎಂದು ಹೇಳಿ ಆಡಿಯೋ ಮಾಡಿದ ಪ್ರಕರಣ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಮಗ್ರ ತನಿಖೆ ನಡೆಸಲು ಸಿಒಡಿಗೆ ವಹಿಸಲಾಗಿದೆ. ಆದರೆ ಸಚಿವರು ರಾಜೀನಾಮೆ ನೀಡಬೇಕು ಎಂಬ ಬಿಜೆಪಿ ನಾಯಕರ ಪ್ರಸ್ತಾವನೆಯನ್ನು ತಳ್ಳಿ ಹಾಕಿದರು.

ಆತ್ಮಹತ್ಯೆ ಮಾಡಿಕೊಂಡವ ಕೃಷಿ ಇತರ ಅಭ್ಯಾಸಗಳಿಂದಾಗಿ ಸಾಲ ಮಾಡಿಕೊಂಡು ಸಮಸ್ಯೆ ಎದುರಿಸುತ್ತಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ಆತನ ಮನೆಯವರೂ ಹೇಳಿಕೆ ನೀಡಿದ್ದಾರೆ. ತನಿಖೆ ನಂತರ ಎಲ್ಲವೂ ಹೊರಬರಲಿದೆ ಎಂದರು. ಹಲಕರ್ಟಿಯಲ್ಲಿ ಬೆಳೆಗಳಿಗೆ ಕೀಟನಾಶಕ ಸಿಂಪಡಿಸಿದ ರೈತರು ಅಸ್ವಸ್ಥಗೊಂಡ ವಿಚಾರಕ್ಕೆ ಕೇಳಿದ ಪ್ರಶ್ನೆಗೆ, ಕೀಟನಾಶಕ ಬ್ಯಾನ್ ಮಾಡಲಾಗಿತ್ತು ಎಂದು ಗೊತ್ತಾಗಿದೆ. ಬ್ಯಾನ್ ಆದ ಕೀಟನಾಶಕ ಹೇಗೆ ರೈತರಿಗೆ ಸಿಕ್ಕಿದೆ ಎಂಬ ಬಗ್ಗೆ ಸಮಗ್ರ ವಿಚಾರಣೆ ನಡೆಸುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net