ಪ್ರಿಯದರ್ಶಿನಿ ಸೊಸೈಟಿ ಗ್ರಾಹಕರ ದಿನಾಚರಣೆ

Mul_Priyadarshini
Published on

ಹಳೆಯಂಗಡಿ: ಗ್ರಾಮೀಣ ವಿತ್ತ ಸಂಸ್ಥೆಗಳು ಜನಸ್ನೇಹಿಯಾಗಿ ಗ್ರಾಹಕರ ಆಶೋತ್ತರಗಳನ್ನು ಈಡೇರಿಸುವ ಜತೆಗೆ ಕೃಷಿ, ಹೈನುಗಾರಿಕೆ ಹಾಗೂ ಉನ್ನತ ಶಿಕ್ಷಣಕ್ಕೆ ಪೂರಕ ಅವಕಾಶಗಳನ್ನು ಕಲ್ಪಿಸಿಕೊಂಡು ತಾವೂ ಬೆಳೆಯಬೇಕು ಎಂದು ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ ಹೇಳಿದರು.

ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಮುಖ್ಯ ಶಾಖೆಯಲ್ಲಿ ಸೋಮವಾರ ಗ್ರಾಹಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ವಾತನಾಡಿದರು.

ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್ ಅಧ್ಯಕ್ಷತೆ ವಹಿಸಿದ್ದರು. ಹಳೆಯಂಗಡಿ ಗ್ರಾಮ ಪಂಚಾಯಿತಿ ವಾಜಿ ಅಧ್ಯಕ್ಷೆ ಪೂರ್ಣಿವಾ ಮಧು, ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ, ನಿರ್ದೇಶಕರಾದ ಉವಾನಾಥ ಜೆ.ಶೆಟ್ಟಿಗಾರ್, ಗಣೇಶ್ ದೇವಾಡಿಗ, ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಶಾಖಾ ಪ್ರಬಂಧಕಿ ಅಕ್ಷತಾ ಶೆಟ್ಟಿ ಮತ್ತಿತರರಿದ್ದರು. ಅಧ್ಯಕ್ಷ ವಸಂತ್ ಬೆರ್ನಾಡ್ ಪ್ರಸ್ತಾವನೆಗೈದರು. ಸಿಬ್ಬಂದಿ ನಿರಂಜಲಾ ಪ್ರಾರ್ಥಿಸಿದರು. ಅಭಿಷ್ಟ ಜೈನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net