ಸಹಜ ಜೀವನ ನಡೆಸಲು ಕೊಡುಗೆ ಪೂರಕ

Gur_MCF
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಅವಡಗಳು ಮತ್ತು ಗ್ಯಾಂಗ್ರಿನ್‌ನಂತಹ ರೋಗಗಳಿಂದ ಅನಿವಾರ್ಯವಾಗಿ ಕಾಲು ಮತ್ತಿತರ ಅಂಗಾಂಗ ಕಳೆದುಕೊಂಡು ದಯನೀಯ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿರುವ ಮಂದಿಗೆ ಕತಕ ಅವಯವದ ಜೋಡಣೆ ತಕ್ಕಮಟ್ಟಿಗೆ ಸಹಜ ಜೀವನ ನಡೆಸಲು ಪೂರಕವಾಗಿದೆ. ಈ ನಿಟ್ಟಿನಲ್ಲಿ ಎಂಸಿಎಫ್ ಸಂಸ್ಥೆಯು ಸಿಎಸ್‌ಆರ್ ಸಹಕಾರದಲ್ಲಿ ಕೃತಕ ಅಂಗಾಂಗ ಜೋಡಣೆ ಸಲಕರಣೆ ನೀಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.

ಪಣಂಬೂರಿನ ಎಂಸಿಎಫ್ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಲಾದ ಸಮಾರಂಭದಲ್ಲಿ ಕೃತಕ ಅಂಗಾಂಗ ಜೋಡಣೆಯ ಸಲಕರಣೆ ವಿತರಿಸಿ ವಾತನಾಡಿದರು.

ಸಂಸ್ಥೆಯ ಸಾವಾಜಿಕ ಜವಾಬ್ದಾರಿ ಹಣಕಾಸು ನೆರವಿನಿಂದ ತರಗತಿ ಕೊಠಡಿ, ಅಂಗನವಾಡಿ ಕೇಂದ್ರದ ನವೀಕರಣ, ಟ್ರಾಲಿ ವಿತರಣೆಯಂತಹ ಹಲವು ಸವಾಜಮುಖಿ ಕಾರ್ಯಗಳು ನಡೆದಿದ್ದು, ಶಾಸಕನ ನೆಲೆಯಲ್ಲಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಎಂಸಿಎಫ್ ಸಿಇಒ ನಿತಿನ್ ಎಂ.ಕಾಂಟಕ್ ವಾತನಾಡಿ, ಸಿಎಸ್‌ಆರ್ ನಿಧಿಯಡಿ ನಡೆದಂತಹ ಈ ಕಾರ್ಯಕ್ರಮ ವೈಯಕ್ತಿಕವಾಗಿ ತೃಪ್ತಿ ತಂದಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತಹ ಯೋಜನೆ ಜಾರಿಗೆ ಸಹಕಾರ ಮುಂದುರಿಯಲಿದೆ ಎಂದು ಭರವಸೆ ನೀಡಿದರು.

ಮೇಯರ್ ಮನೋಜ್ ಕುವಾರ್ ಮತ್ತು ಕಾರ್ಪೋರೇಟರ್ ಅನಿಲ್ ಕುವಾರ್ ಮಾತನಾಡಿದರು. ಎಂಸಿಎಫ್ ಉತ್ಪಾದನಾ ವಿಭಾಗದ ಮುಖ್ಯಸ್ಥ ಗಿರೀಶ್ ಎಸ್. ಪ್ರಸ್ತಾವನೆಗೈದರು. ಕಾರ್ಪೋರೇಟರ್ ಸುಮಂಗಳಾ ರಾವ್, ಎಂಸಿಎಫ್ ಅಧಿಕಾರಿಗಳು ಹಾಗೂ ರೋಟರಿ ಇನ್ನರ್ ವ್ಹೀಲ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಡಾ.ಯೋಗೀಶ್ ನಿರೂಪಿಸಿದರು. ಚೇತನ್ ಮೆಂಡೋನ್ಸ ವಂದಿಸಿದರು.

ಕಾರ್ಯಕ್ರಮದಲ್ಲಿ 11 ಮಂದಿಗೆ ಕೃತಕ ಕಾಲು ಜೋಡಣೆ, 3 ಮಂದಿಗೆ ಶ್ರವಣ ಸಾಧನಾ, ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ವ್ಹೀಲ್‌ಚೇರ್, ಕೂಳೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಟ್ರಾಲಿ, ಯಂತ್ರ ಹಾಗೂ ಸೇವಾ ಭಾರಿ ಸಂಸ್ಥೆಗೆ ಫಿಸಿಯೋಥೆರಪಿ ಸಾಧನಗಳನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net