ಉಚ್ಚಿಲಗುಡ್ಡೆ ಶಾಲಾ ಕ್ರೀಡಾಕೂಟ

Ull_Sports festive
Published on

ಉಳ್ಳಾಲ: ಸೋಮೇಶ್ವರ ಉಚ್ಚಿಲಗುಡ್ಡೆ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಕ್ರೀಡಾಕೂಟ ಶನಿವಾರ ನಡೆಯಿತು.

ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಉದ್ಘಾಟಿಸಿ, ಶಾಲಾ ಮಟ್ಟದಲ್ಲೇ ಕ್ರೀಡಾ ಮನೋಭಾವನೆ ಬೆಳೆಸುವಲ್ಲಿ ವಾರ್ಷಿಕ ಕ್ರೀಡಾಕೂಟಗಳು ಸಹಕಾರಿ ಎಂದು ಹೇಳಿದರು.

ಉದ್ಯಮಿಗಳಾದ ಉದಯಕುವಾರ್ ಹಾಗೂ ಮಹಮ್ಮದಾಲಿ ಕ್ರೀಡಾಜ್ಯೋತಿ ಸ್ವೀಕರಿಸಿದರು. ಹ್ಯಾಂಡಬಾಲ್‌ನಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳಾದ ಹಬೀಬ್ ರಾಯಿಫ್, ಪ್ರದೀಪ್, ಫೈಝಲ್, ಆಫೀಲ್, ಸಲ್ಮಾನ್ ಕ್ರೀಡಾಜ್ಯೋತಿ ಹಸ್ತಾಂತರಿಸಿದರು. ವಿದ್ಯಾರ್ಥಿನಿ ಫೆಂಝ ಕ್ರೀಡಾ ಪ್ರತಿಜ್ಞೆ ಬೋಧಿಸಿದರು.

ಉದ್ಯಮಿ ಅಬ್ದುಲ್ ರಹೀಮ್ ಉಚ್ಚಿಲ, ಶಿಕ್ಷಕಿಯರಾದ ಸಂಧ್ಯಾ, ಬಬಿತಾ, ಮಂಜುನಾಥ್ ಎನ್., ಸಿಂಥಿಯ, ಮಮತಾ, ಸವಿತಾ, ಹರ್ಷಿತಾ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಹರೀಶ್ ಕುಮಾರ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಮೋಹನ್ ಶಿರ್ಲಾಲ್ ಕಾರ್ಯಕ್ರಮ ನಿರ್ವಹಿಸಿದರು. ಚಂದ್ರಶೇಖರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net