

ಬೆಂಗಳೂರು: ಚಿಕ್ಕಜಾಲದ ಎಂವಿ ಸೋಲರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ ಇನ್ಕ್ರಿಮೆಂಟ್ ಆಗಿಲ್ಲವೆಂದು ಕಂಪನಿಯೊಳಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಾಂತಕುಮಾರ್ ಆತ್ಮಹತ್ಯೆ ಮಾಡಿಕೊಂಡ ಉದ್ಯೋಗಿ. ಮಂಗಳವಾರ ರಾತ್ರಿ 9:30ರಲ್ಲಿ ಕಂಪನಿಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಯುವ ಮುನ್ನ ಡೆತ್ ನೋಟ್ ಬರೆದಿರುವ ಮೃತ ಶಾಂತಕುಮಾರ್, ಆರ್ಥಿಕ ಸಮಸ್ಯೆ ಹಾಗೂ ಇನ್ಕ್ರಿಮೆಂಟ್ ಆಗದ ಹಿನ್ನಲೆ ನೊಂದು ನೇಣಿಗೆ ಶರಣಾಗಿರುವುದಾಗಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಹಲವು ವರ್ಷದಿಂದ ಇದೇ ಕಂಪನಿಯಲ್ಲಿ ಕೆಲಸಕ್ಕಿದ್ದ ಶಾಂತಕುಮಾರ್ ಮೂಲತಃ ಹಿರಿಯೂರಿನವನಾದ್ದಾರೆ. ಐಟಿಐ ಮುಗಿಸಿ ಕೆಲಸಕ್ಕೆ ಸೇರಿದ್ದ ಇವರು ಆರ್ಥಿಕವಾಗಿ ಸಮಸ್ಯೆ ಹೊಂದಿದ್ದರು.
ಘಟನೆ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.