ಉಗ್ರರೊಂದಿಗೆ ತೀರ್ಥಹಳ್ಳಿಯ ಯುವಕರಿಬ್ಬರ ಸಂಪರ್ಕ? ಎನ್​ಐಎ ಅಧಿಕಾರಿಗಳು ಭೇಟಿ

police
Published on

ಶಿವಮೊಗ್ಗ: ತೀರ್ಥಹಳ್ಳಿಯ ಯುವಕರಿಬ್ಬರು ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಶಂಕೆ‌ ವ್ಯಕ್ತವಾಗಿದ್ದು, ತೀರ್ಥಹಳ್ಳಿಗೆ ಎನ್​ಐಎ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಸ್ಯಾಟಲೈಟ್ ಫೋನ್ ಬಳಕೆಯ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚ್​ನಲ್ಲಿ ತೀರ್ಥಹಳ್ಳಿ ತಾಲೂಕಿನಾದ್ಯಂತ ಎನ್​ಐಎ ಕೂಬಿಂಗ್ ನಡೆಸಿತ್ತು. ಈ ವೇಳೆ ತೀರ್ಥಹಳ್ಳಿಯ ಯುವಕರಿಬ್ಬರು ಉಗ್ರರೊಂದಿಗೆ ಸಂಪರ್ಕ ಹೊಂದಿರುವುದು ದೃಢಪಟ್ಟಿತ್ತು. ಅಷ್ಟರಲ್ಲಿ ಯುವಕರು ನಾಪತ್ತೆಯಾಗಿದ್ದರು.

ಕಳೆದ‌ ವರ್ಷ ಮಾ.19 ರಂದು ಎನ್​ಐಎ ಅಧಿಕಾರಿಗಳು ತೀರ್ಥಹಳ್ಳಿಯ ಯುವಕರ ಮನೆಗೆ ಬಂದು ವಿಚಾರಣೆ ನಡೆಸಿದ್ದರು. ಇದೀಗ ಹೆಚ್ಚಿನ ತನಿಖೆಗಾಗಿ ಮತ್ತೆ ಯುವಕರ ಮನೆಗೆ ಭೇಟಿ ನೀಡಿರುವ ಎನ್​ಐಎ ಅಧಿಕಾರಿಗಳ ತಂಡ, ತಲೆಮರೆಸಿಕೊಂಡಿರುವ ಯುವಕರು ಕುಟುಂಬದೊಂದಿಗೆ ಸಂಪರ್ಕ ಸಾಧಿಸಿದ್ದಾರೆಯೇ ಎಂದು ತನಿಖೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net