

ಚಿಂತಾಮಣಿ: ಚಿಂತಾಮಣಿ-ಮದನಪಲ್ಲಿ ಹೆದ್ದಾರಿಯ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು ವ್ಯಾಪ್ತಿಯ ಗುಂಟಪಲ್ಲಿ ಕ್ರಾಸ್ ಬಳಿ ತಡರಾತ್ರಿ ಎರಡು ಖಾಸಗಿ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ ಒಂದು ಬಸ್‌ನ ಚಾಲಕ ಸ್ಥಳದಲ್ಲೇ ಮೃತಪಟ್ಟರೆ, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಸುವರ್ಣಮಖಿ ಬಸ್ ಚಾಲಕ, ನೆರೆಯ ಅಂಧ್ರಪ್ರದೇಶದ ಗಂಗಾಧರ್(45) ಮೃತ. ಬೆಂಗಳೂರಿನಿಂದ ಚಿಂತಾಮಣಿ-ಮದನಪಲ್ಲಿ ಮಾರ್ಗವಾಗಿ ಕಡಪಾಗೆ ತೆರಳುತ್ತಿದ್ದ ಎ.ಆರ್.ಟ್ರಾವೆಲ್ಸ್ ಸ್ಲೀಪರ್‌ಕೋಚ್ ಬಸ್ ಮತ್ತು ಮದನಪಲ್ಲಿಯಿಂದ ಚಿಂತಾಮಣಿ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಸುರ್ವರ್ಣ ಮುಖಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡಲು ಹೋದಾಗ ಡಿಕ್ಕಿ ಸಂಭವಿಸಿದೆ ಎನ್ನಲಾಗಿದೆ.
ಗಂಭೀರ ಗಾಯಗೊಂಡ ಮೂವರನ್ನು ಬೆಂಗಳೂರಿನ ನಿಮ್ಹಾನ್ಸ್‌ಗೆ ರವಾನಿಸಲಾಗಿದ್ದು, ಉಳಿದವರನ್ನು ನೆರೆಯ ಆಂಧ್ರದ ಮದನಪಲ್ಲಿಯ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಗಿದ್ದು, ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.