ಶ್ರೀೇತ್ರ ಮುದುಗಾನಕುಂಟೆ ಸಮಗ್ರ ಅಭಿವೃದ್ಧಿಗೆ ಆದ್ಯತೆ

Published on

50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ |  ಕೆ.ಎಚ್​.ಪುಟ್ಟಸ್ವಾಮಿಗೌಡ ಭರವಸೆ |  ಸ್ನಾನಗೃಹ ಕಾಮಗಾರಿಗೆ ಶಂಕುಸ್ಥಾಪನೆ

ಗೌರಿಬಿದನೂರು: ಶ್ರೀೇತ್ರ ಮುದುಗಾನ ಕುಂಟೆಯ ಅಭಿವೃದ್ಧಿಗೆ ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಿರುವುದಾಗಿ ಶಾಸಕ ಕೆ.ಎಚ್​. ಪುಟ್ಟಸ್ವಾಮಿಗೌಡ ತಿಳಿಸಿದರು.

ತಾಲೂಕಿನ ಮುದುಗಾನಕುಂಟೆಯಲ್ಲಿ ಭಕ್ತರ ಅನುಕೂಲಕ್ಕಾಗಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಸ್ನಾನಗೃಹಗಳ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಪ್ರತಿ ಸೋಮವಾರ ಶ್ರೀ ೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಾಜ್ಯದ ವಿವಿಧ ಮೂಲೆಗಳಿಂದ ಬಂದು ಗಂಗಮ್ಮ ದೇವಿ ದರ್ಶನ ಪಡೆಯುತ್ತಾರೆ. ಗ್ರಾಮಸ್ಥರು, ಕಾರ್ಯಕರ್ತರ ಮನವಿ ಮೇರೆಗೆ ಶ್ರೀೇತ್ರದ ಅಭಿವೃದ್ಧಿಗೆ ಕಾಮಗಾರಿಗೆ ಚಾಲನೆ ನೀಡಿದ್ದು, ಗಂಗಮ್ಮ ಕಲ್ಯಾಣಿಗೆ ಹೋಗುವ ರಸ್ತೆಗೆ ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿ ಅನುದಾನದಡಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಮುದುಗಾನಕುಂಟೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ನರಸಿಂಹರೆಡ್ಡಿ ಶಾಸಕರಿಗೆ ಶ್ರೀೇತ್ರದ ಪರದಿಗೆ ಕಾಂಪೌಂಡ್​ ನಿರ್ಮಿಸಿಕೊಡಬೇಕೆಂದು ಮನವಿ ಸಲ್ಲಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು ಮುಂದಿನ ದಿನಗಳಲ್ಲಿ ಅನುದಾನ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.ಮುಖಂಡರಾದ ಲ್ಮನಾರಾಯಣ್​ ಪಟೇಲ್​, ಸದಾಶಿವಪ್ಪ, ಸಿದ್ದಪ್ಪ, ಸಾಗಾನಹಳ್ಳಿ ಶಿವಕುಮಾರ್​, ವೆಂಕಟೇಶ್​, ಜಿಸಿ ಅಶೋಕ್​, ಮಹೇಶ್​, ಹನುಮಂತರಾಯಪ್ಪ, ನಾಗಭೂಷಣ್​ ರೆಡ್ಡಿ, ರು, ನಾಗೇಶ್​, ಮೈಲಾರಪ್ಪ, ಲಂಕಪ್ಪ, ರಾಮಲಿಂಗಯ್ಯ, ಹನುಮಂತ, ಮೂರ್ತಿ, ಎಇಇ ನಾರಾಯಣಸ್ವಾಮಿ, ಕಂದಾಯ ನಿರೀಕ್ಷಕ ಖಾದರ್​, ಜೆಇ ವೆಂಕಟರಮಣಪ್ಪ, ಕಿರಣ್​ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net