ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಆಧ್ಯತೆ

belve
Published on

ಬೆಳ್ವೆ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಆಧ್ಯತೆ ನೀಡಿ ಪ್ರೋತ್ಸಾಹಿಸಿದಾಗ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ಬೆಳ್ವೆ ಹಿದಾಯತುಲ್ ಉಲೂಮ್ ಅರಬಿ ಮದ್ರಸಾ ಅಧ್ಯಕ್ಷ ಮುಸ್ತಾಕ್ ಅಹಮ್ಮದ್ ಬೆಳ್ವೆ ಹೇಳಿದರು.

ಬೆಳ್ವೆ ಹಿದಾಯತುಲ್ ಉಲೂಮ್ ಅರಬಿ ಮದ್ರಸಾ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೌಲನ್ ಮೊಹಮ್ಮದ್ ರಫೀಕ್, ಮೌಲನ್ ಆಸೀಫ್ ನದ್ವಿ, ಬೆಳ್ವೆ ಜುಮಾ ಮಸೀದಿ ಅಧ್ಯಕ್ಷ ಅಹಮ್ಮದ್ ಬ್ಯಾರಿ, ಉಪಾಧ್ಯಕ್ಷ ಅಬ್ದುಲ್ ಸಾಹೇಬ್, ಕಾರ್ಯದರ್ಶಿ ಇಸ್ಮಾಯಿಲ್ ಬ್ಯಾರಿ, ಬೆಳ್ವೆ ಮದ್ರಸಾ ಸ್ಥಾಪಕ ಕಾರ್ಯದರ್ಶಿ ಬಿ.ಕೆ.ಶಬ್ಬೀರ್ ಸಾಹೇಬ್, ಬೆಳ್ವೆ ಇಸ್ಲಾಮಿಕ್ ಯುತ್ ಫೆಡರೇಶನ್ ಅಧ್ಯಕ್ಷ ಮೊಹಮ್ಮದ್ ನಜೀರ್, ವಾರ್ಷಿಕೋತ್ಸವ ಸಮಿತಿ ಸದಸ್ಯ ಅನ್ವರ್ ಹುಸೇನ್, ಶಾಜಾದ್ ಬೆಳ್ವೆ,ಫಝೀಲ್, ನಿಯಾನ್, ರಯಾನ್, ನೌಫಲ್, ಅಫ್ರಾಜ್ ಉಪಸ್ಥಿತರಿದ್ದರು. ಅರ್ಫಾತ್ ಸ್ವಾಗತಿಸಿದರು. ಆಸೀಫ್ ಅಲ್ಬಾಡಿ ವರದಿ ಹಾಗೂ ರಜೀನ್ ಬೆಳ್ವೆ ಸನ್ಮಾನ ಪತ್ರ ವಾಚಿಸಿದರು. ಮೊಹಮ್ಮದ್ ಜಾಸೀಂ, ಮೊಹಮ್ಮದ್ ರಬಿ, ಮೊಹಮ್ಮದ್ ಫಾರೀಶ್ ಬಹುಮಾನ ಪಟ್ಟಿ ವಾಚಿಸಿದರು. ಮೌಲನ್ ಮೊಹಮ್ಮದ್ ರಫೀಕ್ ವಂದಿಸಿದರು.

ಬೆಳ್ವೆ ಜುಮಾ ಮಸೀದಿಗೆ ಭೂಮಿ ವಕ್ಫ ನೀಡಿದ ದಾನಿ ಗೌಸ್ ಸಾಹೇಬ್ ಬೆಳ್ವೆ (ಬಾಪು ಸಾಹೇಬ್), ಮದ್ರಸ್ ಅಭಿವೃದ್ಧಿ ದಾನಿ ಅಯೂಬ್ ಬ್ಯಾರಿ ಅಲ್ಬಾಡಿ ಅವರಿಗೆ ಸನ್ಮಾನ, ಅಲ್ಬಾಡಿ ಶ್ರೀಲಕ್ಷ್ಮೀ ಶಾಮಿಯಾನ್ ಮತ್ತು ಲೈಟಿಂಗ್ಸ್ ಉದ್ಯಮಿ ದಿ.ಶಂಕರ ನಾಯ್ಕ ಸೇವೆ ಸ್ಮರಣಾರ್ಥ ಮರಣೋತ್ತರ ಗೌರವವನ್ನು ಸಹೋದರ ಕುಂದಾಪುರ ಲೋಕೋಪಯೋಗಿ ಇಲಾಖೆ ಅಭಿಯಂತ ಮಹಾಬಲ ನಾಯ್ಕ ಅಲ್ಬಾಡಿ ಅವರಿಗೆ ಗೌರವ ಸಮರ್ಪಣೆ ನೀಡಲಾಯಿತು. ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net