ನಮೋ ವಿನಮ್ರತೆಗೆ ತುಮಕೂರಿಗರು ಫಿದಾ

Modi_Vinamrathe
Published on

ತುಮಕೂರು: ಪ್ರಧಾನಿ ಮೋದಿ ವೇದಿಕೆ ಏರುತ್ತಲೇ ಜನರತ್ತ ಕೈಬೀಸಿದರು. ಈ ಸಂದರ್ಭದಲ್ಲಿ ಮುಖ್ಯಸಭಾಂಗಣದ ಬಲ-ಎಡಭಾಗದಲ್ಲಿ ದೂರದಲ್ಲಿದ್ದ ಜನರ ಕಾಣುತ್ತಿರಲಿಲ್ಲ. ಅದನ್ನು ಕಂಡು ವೇದಿಕೆ ಎಡ, ಬಲ ತುದಿಗೆ ಬಂದ ಮೋದಿ ವಿನಮ್ರತೆಯಿಂದ ಬಾಗಿ ನಮಿಸಿದ ಶೈಲಿ ಸಭೆಯಲ್ಲಿದ್ದ ಜನಸ್ತೋಮದ ಪ್ರೀತಿಗೆ ಪಾತ್ರವಾಯಿತು. ಈ ಫೋಟೋ ಎಲ್ಲರ ಸ್ಟೇಟಸ್‌ಗಳಲ್ಲಿ ರಾರಾಜಿಸಿದವು.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಶುಕ್ರವಾರ ಪ್ರಧಾನಿ ಮೋದಿ ತಮ್ಮ ವಿಶೇಷ ಶೈಲಿ ಮೂಲಕ ಕಾರ್ಯಕರ್ತರು, ಸಭೆಯಲ್ಲಿ ಭಾಗವಹಿಸಿದ್ದ ಜನರ ಮನಸೂರೆಗೊಂಡರು.

ಕನ್ನಡದಲ್ಲೇ ಮಾತು ಆರಂಭಿಸಿ, ಸಿದ್ದಗಂಗೆ, ಆದಿಚುಂಚನಗಿರಿ ಸ್ಮರಣೆ

ಕಲ್ಪತರು ನಾಡಿನ ನನ್ನ ಸಹೋದರ -ಸಹೋದರಿಯರಿಗೆ ನಮಸ್ಕಾರಗಳು.... ಸಿದ್ದಗಂಗಾ ಮಠ, ಆದಿಚುಂಚನಗಿರಿ ಮಹಾಸಂಸ್ಥಾನ ಶ್ರದ್ಧಾಪೂರ್ವಕ ನಮನಗಳನ್ನು ಸಲ್ಲಿಸುವೆ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ ಮೋದಿ, ಇಲ್ಲಿ ಸೇರಿರುವ ಜನಸ್ತೋಮ ನೋಡಿದರೆ ಮತ್ತು ಹೆಲಿಪ್ಯಾಡ್‌ನಿಂದ ಹೊರಬರುತ್ತಿದ್ದಂತೆ ರಸ್ತೆಯ ಇಕ್ಕೆಲುಗಳ್ಲಿ ನಿಂತಿದ್ದ ಜನರನ್ನು ಕಂಡಬಳಿಕ ಮತ್ತೆ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂಬ ವಿಶ್ವಾಸ ನನ್ನಲ್ಲಿ ಮೂಡಿದೆ ಎಂದು ಉದ್ಘರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net