

ಸುಳ್ಯ: ಆಶ್ರಮವಾಸಿಗಳ ಜತೆ ಪ್ರಧಾನಿಯ ಹುಟ್ಟುಹಬ್ಬ ಆಚರಿಸುವ ಮಹಿಳಾ ಮೋರ್ಚಾದ ಕಾರ್ಯ ಮಾದರಿ. ಪ್ರಧಾನಿ ಮೋದಿ ದೀರ್ಘಾಯುಷ್ಯ ಹೊಂದಲಿ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಚಾ, ವನವಾಸಿ ಕಲ್ಯಾಣ ಆಶ್ರಮದಲ್ಲಿ ಆಯೋಜಿಸಿದ ಮೋದಿ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಗಿಡ ನೆಟ್ಟು ಚಾಲನೆ ನೀಡಿ ಮಾತನಾಡಿದರು.
ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ, ನರೇಂದ್ರ ಮೋದಿ ಭಾವಚಿತ್ರಕ್ಕೆ ಆಶ್ರಮದ ವಿದ್ಯಾರ್ಥಿಗಳು ಆರತಿ ಬೆಳಗಿದರು.
ಮಂಡಲ ಕೋಶಾಧಿಕಾರಿ ಶುಭೋದ್ ಶೆಟ್ಟಿ ಮೇನಾಲ, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯೆ ಗುಣವತಿ ಕೊಲ್ಲಂತಡ್ಕ, ನಗರಸಭೆ ಅಧ್ಯೆ ಶಶಿಕಲಾ ಎ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹೇಮಂತ್ ಮಠ, ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ಪುಷ್ಪಾ ಮೇದಪ್ಪ, ಯುವಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಪಾತಿಕಲ್ಲು, ತಾಪಂ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ನಿರ್ದೇಶಕಿ ಶ್ರೀದೇವಿ ನಾಗರಾಜ್ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಅಖಿಲಾ ನೆಕ್ರಾಜೆ ಪ್ರಾರ್ಥಿಸಿದರು. ಮಹಿಳಾ ಮೋರ್ಚಾ ಅಧ್ಯೆ ಇಂದಿರಾ ಕೆ. ಸ್ವಾಗತಿಸಿದರು. ಶ್ರೀದೇವಿ ನಾಗರಾಜ್ ಭಟ್ ವಂದಿಸಿದರು. ಬಳಿಕ ಸಹ ಭೋಜನ ನಡೆಯಿತು.