ಪಿಎಂ ಕಿಸಾನ್ ಸಮ್ಮಾನ್ ಇ-ಕೆವೈಸಿ ಗೆ ಕೊನೆಯ ಅವಕಾಶ

Prime Minister, Kisan, Samman, E-KYC,
Published on

ಚಿತ್ರದುರ್ಗ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ಇ-ಕೆವೈಸಿ ಹಾಗೂ ಹೊಸದಾಗಿ ಹೆಸರು ನೋಂ ದಾಯಿಸಲು ಕೊನೆಯ ಅವಕಾಶವನ್ನು ಕಲ್ಪಿಸಲಾಗಿದೆ.

ತಾಲೂಕಿನಲ್ಲಿರುವ 40,403 ಈ ಯೋಜನೆಯ ಫಲಾನುಭವಿಗಳ ಪೈಕಿ 30,959 ರೈತರು ಇ-ಕೆವೈಸಿ ಪೂರ್ಣಗೊಳಿಸಿದ್ದಾರೆ.

9444 ರೈತರ ಇ-ಕೆವೈಸಿ ಬಾಕಿ ಇದ್ದು, ಇ-ಕೆವೈಸಿ ಆಗದಿದ್ದರೆ ಮುಂದಿನ ಕಂತಿನ ಹಣ ಜಮಾ ಆಗದು.

http://pmkisan.gov.in ವೆಬ್ ಸೈಟ್‌ನಲ್ಲಿ ಆಧಾರ್ ಮತ್ತು ಮೊಬೈಲ್ ಸಂಖ್ಯೆ ನಮೂದಿಸುವ ಮೂಲಕ ಇ-ಕೆ ವೈಸಿ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡುವಂತೆ ಸಹಾಯಕ ಕೃಷಿ ನಿರ್ದೇಶಕ ಎನ್.ಚಂದ್ರಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net