

ತುಮಕೂರು: ಶಿಕ್ಷಕರ ಕುಂದುಕೊರತೆ ಆಲಿಸಲು ಹೋಬಳಿವಾರು ಗುರುಸ್ಪಂದನಾ ಕಾರ್ಯಕ್ರಮ ಆಯೋಜನೆ, ಬೇಸಿಗೆ ರಜಾ ಅವಧಿಯಲ್ಲಿ ಅಕ್ಷರದಾಸೋಹ ಕಾರ್ಯದಲ್ಲಿ ನಿರತರಾಗಿದ್ದ ಶಿಕ್ಷಕರಿಗೆ ಗಳಿಕೆ ರಜೆ ಮಂಜೂರು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂ ತಾಲೂಕು ಟಕವು ಆಗ್ರಹಿಸಿದೆ.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ತಾಲೂಕು ಅಧ್ಯಕ್ಷ ಪಿ.ಜಿ.ತಿಮ್ಮೇಗೌಡ ನೇತೃತ್ವದ ನಿಯೋಗವು ಶುಕ್ರವಾರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹನುಮಂತಪ್ಪರನ್ನು ಭೇಟಿ ಮಾಡಿ ಸ್ಥಗಿತ ವೇತನ ಬಡ್ತಿಗೆ ಅರ್ಹರಿರುವ ಶಿಕ್ಷಕರ ಪಟ್ಟಿ, ವೈದ್ಯಕಿಯ ವೆಚ್ಚದ ಮರುಪಾವತಿಗೆ ಅನುದಾನ ಬಿಡುಗಡೆ ಸೇರಿದಂತೆ 14 ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಲ್ಲಿಸಿತು.
2024ರ ಬೇಸಿಗೆ ರಜೆ ಅವಧಿಯಲ್ಲಿ ಅಕ್ಷರ ದಾಸೋಹ ಕರ್ತವ್ಯ ನಿರ್ವಹಿಸಿರುವ ಶಿಕ್ಷಕರಿಗೆ ನಿಯಮಾನುಸಾರ ಗಳಿಕೆ ರಜೆ ಮಂಜೂರು, 39 ಕಲಂಗಳಿರುವ ಎಚ್ಆರ್ಎಂಎಸ್ ಪ್ರತಿಯನ್ನು ತಿದ್ದುಪಡಿಯ ನಂತರ ಎಲ್ಲಾ ಅಂಶಗಳನ್ನು ಒಳಗೊಂಡ ಪ್ರತಿಯನ್ನು ಎಚ್ಆರ್ಎಂಎಸ್ನಲ್ಲಿ ನಮೂದಿಸುವುದು, ಹೋಬಳಿವಾರು ಗುರುಸ್ಪಂದನಾ ಕಾರ್ಯಕ್ರಮ ಆಯೋಜಿಸಿ ಎಲ್ಲ ಶಿಕ್ಷಕರ ಕುಂದುಕೊರತೆ ಬಗೆಹರಿಸುವುದು, ಎಚ್ಆರ್ಎಂಎಸ್ಗೆ ನಮೂದಾಗದ ಶಿಕ್ಷಕರ ದೂರವಾಣಿ ಸಂಖ್ಯೆಗಳನ್ನು ನಮೂದಿಸುವುದು, ಶಿಕ್ಷಕರುಗಳ ಮತ್ತು ಶಾಲಾ ದಾಖಲೆಗಳ ಸರಳೀಕರಣ,ಬೋಧನೆಗೆ ಹೆಚ್ಚು ಒತ್ತು, ಅತಿಥಿ ಶಿಕ್ಷಕರ ವೇತನ ಸಕಾಲದಲ್ಲಿ ಬಿಡುಗಡೆ, ಸ್ಥಗಿತ ವೇತನ ಬಡ್ತಿ ಗೆ ಆರ್ಹರಿರುವ ಶಿಕ್ಷಕರ ಪಟ್ಟಿ ಬಿಡುಗಡೆ ಮಾಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸ್ವೀಕರಿಸಿ ಮಾತನಾಡಿದ ಬಿಇಒ ಎಂ.ಹನುಮಂತಪ್ಪ, ಸಂಘದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಕ್ರಮವಹಿಸಲಾಗುವುದು. ಎಲ್ಲಾ ಶಿಕ್ಷಕರುಗಳು ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಬೋಧನೆಗೆ ಹೆಚ್ಚು ಒತ್ತು ಕೊಡಬೇಕು. ಶಾಲಾ ಅವಧಿಯಲ್ಲಿ ತಾಲೂಕಿನ ಕೆಲವು ಶಿಕ್ಷಕರುಗಳು ಶಾಲೆಯನ್ನ ಬಿಟ್ಟು ಹೊರಗಡೆ ಓಡಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಶಿಕ್ಷಕರುಗಳ ವಿರುದ್ಧ ಶಿಸ್ತುಕ್ರಮವನ್ನು ಕೈಗೊಳ್ಳಲಾಗುವುದು. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂದು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಸಂದ ಉಪಾಧ್ಯಕ್ಷರುಗಳಾದ ಆರ್.ಕೋಮಲ, ಕೆ.ವಿ.ಜಯರಾಮ್, ಸಹಕಾರ್ಯದರ್ಶಿಗಳಾದ ಕೆ.ಟಿ.ಶಾಂತಕುಮಾರಿ, ಡಿ.ಪದ್ಮರಾಜ್, ಖಜಾಂಚಿ ಟಿ.ಎಚ್.ಲೋಕೇಶ್, ಜಿಲ್ಲಾ ಸಂಘದ ಪದಾಧಿಕಾರಿಗಳಾದ ಮಂಜಣ್ಣ, ಜಯಲಕ್ಷ್ಮಮ್ಮ,ದಿನೇಶ್, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಕೆ.ನಾಗರಾಜ್, ನಿರ್ದೇಶಕರುಗಳಾದ ಸಂಪತ್ ಕುಮಾರ್, ನಾಗರತ್ನ, ಮಂಗಳಮ್ಮ, ಸುರೇಶ್ಬಾಬು, ಆರ್ಯ ಬಾಲಿಕಾ ಸಂಪತ್ಕುಮಾರ್,, ಮಲ್ಲಿಕಾರ್ಜುನ, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಅಧ್ಯೆ ಅನುಸೂಯಾದೇವಿ, ಸಿದ್ದಮ್ಮ ಮತ್ತಿತರರು ಉಪಸ್ಥಿತರಿದ್ದರು.