ಪ್ರಾಥಮಿಕ ಶಿಕ್ಷಣ ಭವಿಷ್ಯದ ಮೆಟ್ಟಿಲು: ಡಾ.ಲಿಲ್ಲಿ ಪಿರೇರಾ ಅಭಿಮತ

Kin_education
Published on

ಕಿನ್ನಿಗೋಳಿ: ಪ್ರಾಥಮಿಕ ಶಿಕ್ಷಣ ಮುಂದಿನ ಭವಿಷ್ಯದ ಮೆಟ್ಟಿಲು, ಮಕ್ಕಳು ಉತ್ತಮ ಶಿಕ್ಷಣ ಪಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಬೆಥನಿ ಶಿಕ್ಷಣ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷೆ ಡಾ.ಲಿಲ್ಲಿ ಪಿರೇರಾ ಬಿ.ಎಸ್.ಹೇಳಿದರು.

ಕಿನ್ನಿಗೋಳಿ ಮೇರಿವೇಲ್ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಿನ್ನಿಗೋಳಿ ಚರ್ಚ್‌ನ ಪ್ರಧಾನ ಧರ್ಮಗುರು ಜೋಕಿಂ ಫರ್ನಾಂಡಿಸ್, ಮಂಗಳೂರು ಎಂಆರ್‌ಪಿಎಲ್ ಎನ್‌ಐಪಿಎಂ ವಿಭಾಗ ಚೇರ್ಮನ್ ಸ್ಟೀವನ್ ಪಿಂಟೋ, ಮೇರಿವೆಲ್ ಕಾನ್ವೆಂಟಿನ ಸುಪೀರಿಯರ್ ಸಿ.ಪ್ರೇಮಲತಾ ಬಿಎಸ್, ಶಾಲಾ ಸಂಚಾಲಕಿ ಸಿ.ಮೋರಿನ್, ಹಳೇ ವಿದ್ಯಾರ್ಥಿ ಯುಕೆ ಇಂಜಿನಿಯರ್ ರೆಚಲ್ ಜೋಸ್‌ಲಿನ್ ಮಥಾಯಸ್, ಮಂಗಳೂರಿನ ಪ್ರಸಾದ ಬುಕ್ ಸಂಸ್ಥೆಯ ವಿಶಾಲ್ ರಚ್ಚ ಶೈಕ್ಷಣಿಕ ವರ್ಷದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವ, ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.

ಪ್ರಾಂತೀಯ ಅಧ್ಯಕ್ಷೆ ಡಾ.ಲಿಲ್ಲಿ ಪಿರೇರಾ ಅವರನ್ನು ಗೌರವಿಸಲಾಯಿತು. ಶಿಕ್ಷಕ ರಕ್ಷಕ ಸಂಘ ಉಪಾಧ್ಯಕ್ಷ ಸತೀಶ್ ಸಲ್ದಾನಾ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಸಿ.ಮನೀಶಾ ರೊಡ್ರಿಗಸ್ ಪ್ರಸ್ತಾವನೆಗೈದು, ಸ್ವಾಗತಿಸಿದರು. ಶಿಕ್ಷಕಿ ಸವಿತಾ, ಲವಿನಾ ಕಾರ್ಯಕ್ರಮ ನಿರೂಪಿಸಿದರು. ವೀಣಾ ವಂದಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net