ಕಾಶಿ ವಿಶ್ವೇಶ್ವರ ದೇಗುಲ ಅರ್ಚಕರನ್ನು ಕೊಂದು 2 ದಿನ ಅಂಗಡಿಯಲ್ಲೇ ಶವ ಇಟ್ಟಿದ್ದು ಏಕೆ? ಬಯಲಾಯ್ತು ಸ್ಫೋಟಕ ರಹಸ್ಯ

priests murder case
Published on

ಬೆಂಗಳೂರು: ಮೂರೂವರೆ ತಿಂಗಳ ಹಿಂದೆ ಕಾಡುಗೋಡಿಯ ಕಾಶಿ ವಿಶ್ವೇಶ್ವರಸ್ವಾಮಿ ದೇವಸ್ಥಾನದ ಅರ್ಚಕರನ್ನು ಕೊಂದು ಹೂತಿಟ್ಟಿದ್ದ ಶವವನ್ನು ತಹಸೀಲ್ದರ್​ ಸಮ್ಮುಖದಲ್ಲಿ ಗುರುವಾರ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಅರ್ಚಕ ನೀಲಕಂಠ ದೀಕ್ಷಿತ್​ ಅಲಿಯಾಸ್​ ದೊರೆ (57) ಮೃತರು. ಶವದ ಮೇಲಿನ 4 ಉಂಗುರ, ಜನಿವಾರ ಗುರುತಿನ ಆಧಾರದ ಮೇಲೆ ನೀಲಕಂಠ ದೀಕ್ಷಿತ್​ ಎಂಬುದು ಕುಟುಂಬ ಸದಸ್ಯರು ದೃಢಪಡಿಸಿದರು. ಆನಂತರ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಸೆ.5ರಂದು ಕಾಣೆಯಾಗಿದ್ದ ಅರ್ಚಕರನ್ನು ಅಂದು ರಾತ್ರಿಯೇ ಕಿಡಿಗೇಡಿಗಳು ಕೊಂದು ಅಂಗಡಿಯಲ್ಲೇ 2 ದಿನ ಶವ ಇಟ್ಟುಕೊಂಡಿದ್ದರಂತೆ!

ಸೆ.5ರಂದು ಕಾಣೆಯಾಗಿದ್ದರು. ಪೊಲೀಸರ ತನಿಖೆ ವೇಳೆ ಅರ್ಚಕರಿಂದ 10 ಲಕ್ಷ ರೂ. ಸಾಲ ಪಡೆದಿದ್ದ ಹಾರ್ಡ್​ವೇರ್​ ಅಂಗಡಿ ಮಾಲೀಕ ಮಂಜುನಾಥ್​, ತನ್ನ ಸಹಚರರ ಜತೆ ಸೇರಿ ನೀಲಕಂಠ ದೀತ್​ನನ್ನು ಹತ್ಯೆ ಮಾಡಿ ಶವವನ್ನು ಹೂತಿಟ್ಟಿರುವ ಕೃತ್ಯ ಬೆಳಕಿಗೆ ಬಂದಿತ್ತು. ಆರೋಪಿಗಳ ಹೇಳಿಕೆ ಆಧರಿಸಿ ಶವ ಹೂತಿಟ್ಟ ಜಾಗ ಪತ್ತೆಹಚ್ಚಿದ ಪೊಲೀಸರು ಬೆಂಗಳೂರು ಪೂರ್ವ ತಾಲೂಕಿನ ತಹಸೀಲ್ದರ್​ ಎಸ್​. ಅಜಿತ್​ ಕುಮಾರ್​ ರೈ ಸಮುಖದಲ್ಲಿ ಮೃತ ದೇವನ್ನು ಹೊರತೆಗೆದರು. ಇದನ್ನೂ ಓದಿರಿ 6 ದಿನದ ಹಿಂದೆ ನಾಪತ್ತೆಯಾಗಿದ್ದ ತಾಯಿ-ಮಕ್ಕಳು ಊರ ಕೆರೆಯಲ್ಲಿ ಶವವಾಗಿ ಪತ್ತೆ!

ನೀಲಕಂಠ ದೀಕ್ಷಿತ್​ ಕಣ್ಮೆರೆ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಮೊದಲು ಅರ್ಚಕರ ಬಳಿ ಸಾಲ ಪಡೆದಿದ್ದವರನ್ನು ವಿಚಾರಣೆ ಮಾಡಿದ್ದರು. ಕಾಡುಗೋಡಿ ಯಲ್ಲಾರೆಡ್ಡಿ ಸರ್ಕಲ್​ನಲ್ಲಿನ ಹಾರ್ಡ್​ವೇರ್​ ಅಂಗಡಿ ಮಾಲೀಕ ಮಂಜುನಾಥ್​, 2 ವರ್ಷಗಳ ಹಿಂದೆ ಅರ್ಚಕರ ಬಳಿ ಬಡ್ಡಿಗೆ 10 ಲಕ್ಷ ರೂ. ಸಾಲ ಪಡೆದಿದ್ದ. ಸೆ.5ರ ರಾತ್ರಿ ಸಾಲದ ಹಣ ಕೇಳಲು ಅಂಗಡಿ ಬಳಿಗೆ ಹೋದ ಅರ್ಚಕರನ್ನು ಒಳಗೆ ಕರೆದು ಅವರ ಕ್ರಿಕೆಟ್​ ವಿಕೆಟ್​ನಿಂದ ತಲೆಗೆ ಹೊಡೆದು ಚಾಕುವಿನಿಂದ ಚುಚ್ಚಿ ಮಂಜುನಾಥ್​ ಹತ್ಯೆ ಮಾಡಿದ್ದ. ಅಂಗಡಿಯಲ್ಲಿದ್ದ ಸಿಬ್ಬಂದಿ ಗೋಪಿ ಮತ್ತು ಮಂಜುನಾಥ್​ ಎಂಬುವರು ಪ್ರಶ್ನಿಸಿದಾಗ ಅವರಿಗೆ ಹಣದ ಆಮಿಷವೊಡ್ಡಿ ಬಾಯಿ ಮುಚ್ಚಿಸಿದ್ದ.

ಶವವನ್ನು ಅಂಗಡಿಯಲ್ಲಿಯೇ ಎರಡು ದಿನ ಇಟ್ಟುಕೊಂಡು ರ್ಟಪೆಟ್​ ಆಯಿಲ್​ನಿಂದ ರಕ್ತದ ಕಲೆ ತೊಳೆದಿದ್ದರು. ಆನಂತರ ಶವವನ್ನು ಕಾರಿನಲ್ಲಿ ತಿರುಮಲಶೆಟ್ಟಿ ಕ್ರಾಸ್​ನ ಕಲ್ಯಾಣ ಮಂಟಪದ ಹಿಂಭಾಗದ ಸರ್ಕಾರಿ ಜಾಗದಲ್ಲಿ ಕಸ ವಿಂಗಡಣೆ ಘಟಕ ನಿರ್ಮಾಣಕ್ಕೆ ಪಾಯ ತೆಗೆದಿದ್ದ ಸಮೀಪವೇ ಮಣ್ಣು ತೆಗೆದು ಶವ ಹೂತಿಟ್ಟು ಬಂದಿದ್ದರು. ಇದನ್ನೂ ಓದಿರಿ ಗಂಡ-ಮಕ್ಕಳನ್ನು ಬಿಟ್ಟು ಬರಲು ಒಪ್ಪದ ಮಹಿಳೆ ಬದುಕು ದುರಂತ ಅಂತ್ಯ

ಈ ನಡುವೆ ತನಿಖೆ ಚುರುಕುಗೊಳಿಸಿದ ಪೊಲೀಸರು ಅರ್ಚಕರ ಬಳಿ ಸಾಲ ಪಡೆದಿದ್ದವರನ್ನು ವಿಚಾರಣೆಗೆ ಒಳಪಡಿಸಿದ್ದರು. ಎಲ್ಲರೂ ಮಾಜಿ ಕಾರ್ಪೋರೇಟರ್​ ಅಂಜನೇಯ ರೆಡ್ಡಿ ಮೂಲಕ ನಿಗದಿತ ಅವಧಿಯಲ್ಲಿ ಬಡ್ಡಿ ಕೊಡುತ್ತಿದ್ದಾಗಿ ಹೇಳಿದ್ದರು. ಆದರೆ, ಆರೋಪಿ ಮಂಜುನಾಥ್​ ಮಾತ್ರ ಅಸಲು ಬಡ್ಡಿ ಕೊಟ್ಟಿದ್ದಾಗಿ ಹೇಳಿದ್ದ. ಅನುಮಾನಗೊಂಡ ಪೊಲೀಸರು ಈತನ ಮೇಲೆ ಕಣ್ಣಿಟ್ಟಿದ್ದರು. ಈತನ ಅಂಗಡಿಯಲ್ಲಿ ಕೆಲಸಕ್ಕಿದ್ದ ಗೋಪಿ ಮತ್ತು ಮಂಜುನಾಥ್​ ಎಂಬುವವರಿಗೆ ಆರೋಪಿ ಮಂಜುನಾಥ್​ ದ್ವಿಚಕ್ರ ವಾಹನ ಕೊಡಿಸಿದ್ದ. ಅಲ್ಲದೆ ಅವರಿಬ್ಬರಿಗೆ ಆಗಾಗ್ಗೆ ದುಡ್ಡು ಕೊಡುತ್ತಿದ್ದ. ಗೋಪಿ ಮತ್ತು ಮಂಜುನಾಥ್​ ದುಂದು ವೆಚ್ಚ ಮಾಡುತ್ತಿದ್ದರು. ಇದನ್ನೆಲ್ಲ ಗಮನಿಸಿದ ಪೊಲೀಸರು ಅವರಿಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದ್ದು, ಅರ್ಚಕರ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net