

ಕಾರವಾರ: ಒಳ್ಳೆಯ ನಾಗರಿಕ ಸಮಾಜ, ಒಳ್ಳೆಯ ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ವಿನೋದ ವಿ.ಅಣ್ವೇಕರ್ ಹೇಳಿದರು.
ಬಿಇಒ ಕಚೇರಿ, ವಿವಿಧ ಶಿಕ್ಷಕ ಸಂಘಟನೆಗಳಿಂದ ನಗರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ದುಶ್ಚಟಗಳಿಗೆ ಬಲಿಯಾಗುತ್ತಿತ್ತು. ಶಿಕ್ಷಕರು ಅವುಗಳ ದುಷ್ಪರಿಣಾಮಗಳ ಬಗ್ಗೆ ತಿಳಿಸುವ ಕೆಲಸ ಮಾಡಬೇಕು ಎಂದರು. ನಿವೃತ್ತ ಪ್ರಾಂಶುಪಾಲ ಡಾ.ಶಿವಾನಂದ ನಾಯಕ ಉಪನ್ಯಾಸ ನೀಡಿ, ಶಿಕ್ಷಕ ಎಂದರೆ ದೀಪವಿದ್ದಂತೆ. ದೀಪ ತಾನು ಬೆಳಗಿ, ಇತರರಿಗೂ ಬೆಳಕಾಗುತ್ತದೆ.
ಶಿಕ್ಷಕ ತನ್ನ ಜ್ಞಾನದ ಕ್ಷಿತಿಜವನ್ನು ವಿಸ್ತರಿಸಿಕೊಂಡು ಎಲ್ಲರನ್ನೂ ತನ್ನೆಡೆಗೆ ಸೆಳೆಯುತ್ತಾನೆ ಮತ್ತು ಅವರಿಗೆ ಜ್ಞಾನ ಹಂಚಿ ಬದುಕಿಗೆ ಬೆಳಕಾಗುತ್ತಾನೆ ಎಂದರು.
ಇದನ್ನೂ ಓದಿ:ಕಡತ ವಿಲೇವಾರಿ ಬಾಕಿ ಉಳಿಸಿದರೆ ಕಠಿಣ ಕ್ರಮ
ತಾಪಂ ಇಒ ಆನಂದಕುಮಾರ ಬಾಲಪ್ಪನವರ್ ಅಧ್ಯಕ್ಷತೆ ವಹಿಸಿದ್ದರು.ಅಕ್ಷರ ದಾಸೋಹ ಅಧಿಕಾರಿ ಆರ್.ತ್ರಿವೇಣಿ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಆರ್. ಪಿ. ಗೌಡ, ಪ್ರೌಢ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಜೆ ರಂಗನಾಥ, ಅಕ್ಷರ ದಾಸೋಹದ
ಸಹಾಯಕ ನಿರ್ದೇಶಕ ಪ್ರಿಯ ನಾಯಕ,
ಬಿಆರ್ ಸಿ ಸಮನ್ವಯ ಅಧಿಕಾರಿ ರಾಜೇಂದ್ರ ನಾಯ್ಕ, ಮುಖ್ಯ ಅಧ್ಯಾಪಕರ ಸಂಘದ ಅಧ್ಯಕ್ಷ ದಿನೇಶ್ ಗಾವಂಕರ್, ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಸುಧಾಕರ್ ಗುನಾಗಿ , ಅಂಕೋಲಾ ಅರ್ಬನ್ ಕೋ. ಆಪರೇಟಿವ್ ಬ್ಯಾಂಕ್ ನಿರ್ದೇಶಕಿ ಅನುರಾಧ ನಾಯ್ಕ ಇದ್ದರು.
ಬಿಇಒ ಚಂದ್ರಹಾರ ರಾಯ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜೈ ರಂಗನಾಥ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದು ಗೌಡ ಇತರರು ಇದ್ದರು.