ತ್ಯಾಜ್ಯ ಸಮಸ್ಯೆ ವಿರುದ್ಧ ಕೋರ್ಟ್‌ಗೆ ಮೊರೆ: ಎನ್‌ಎಸ್‌ಪಿಐ ರಾಜ್ಯಾಧ್ಯಕ್ಷ ಕೆ.ಪಿ.ಮುನೀರ್ ಮಾಹಿತಿ

court
Published on

ಕುಂಬಳೆ: ರಾಜ್ಯದ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಾಗೂ ರಸ್ತೆಬದಿಗಳಲ್ಲಿ ತ್ಯಾಜ್ಯ ಎಸೆಯುವವರ ವಿರುದ್ದ ಕಾನೂನು ಕ್ರಮ ಜರುಗಿಸಲು ಎನ್‌ಎಸ್‌ಪಿಐ(ಭಾರತೀಯ ರಾಷ್ಟ್ರೀಯ ಜಾತ್ಯತೀತ ಪಕ್ಷ) ಸಿದ್ಧತೆ ನಡೆಸಿದೆ ಎಂದು ರಾಜ್ಯಾಧ್ಯಕ್ಷ ಕೆ.ಪಿ.ಮುನೀರ್ ಕುಂಬಳೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ತ್ಯಾಜ್ಯ ವಿಲೇ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ತಿಂಗಳೊಳಗೆ ಕಸದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದರೆ ಪ್ರಬಲ ಮುಷ್ಕರ ಹಮ್ಮಿಕೊಂಡು ನ್ಯಾಯಾಲಯದ ಮೊರೆ ಹೋಗಲಾಗುವುದು. ಎಲ್ಲೆಂದರಲ್ಲಿ ಕಸ ಎಸೆಯುವುದರಿಂದ ಹಳದಿ ಕಾಮಾಲೆ, ಡೆಂಗೆ, ಮಲೇರಿಯಾ, ಚಿಕೂನ್ ಗುನ್ಯಾ ಹರಡುತ್ತಿದ್ದು, ಇದನ್ನು ಆರೋಗ್ಯ ಸಚಿವರು ಹಾಗೂ ಉನ್ನತ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಎನ್‌ಎಸ್‌ಟಿಯು ರಾಜ್ಯಾಧ್ಯಕ್ಷ ಸಿ.ಎಂ.ಶೇಕುಞ್ಞೆ, ಸದಸ್ಯ ಮುಹಮ್ಮದ್ ಹಾಜಿ ವರ್ಕಾಡಿ, ವಲಯ ಅಧ್ಯಕ್ಷ ಕೆ.ನವಾಝ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬದರುದ್ದೀನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net