ಸೊಸೈಟಿ ಅಧ್ಯಕ್ಷರಾಗಿ ವೆಂಕಟೇಶ್ ಬಿ.ಶೆಣೈ ಆಯ್ಕೆ

president
ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಕೋ ಆಪರೇಟಿವ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಜಿ.ವೆಂಕಟೇಶ ಬಿ.ಶೆಣೈ ಅವಿರೋಧವಾಗಿ ಆಯ್ಕೆಯಾದರು.
Published on

ಗಂಗೊಳ್ಳಿ: ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಕೋ ಆಪರೇಟಿವ್ ಸೊಸೈಟಿಯ 2024-26ನೇ ಸಾಲಿನ ಅಧ್ಯಕ್ಷರಾಗಿ ಜಿ.ವೆಂಕಟೇಶ ಬಿ.ಶೆಣೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಹಕಾರಿ ಸಭಾ ಭವನದಲ್ಲಿ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ವೆಂಕಟೇಶ್ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವರನ್ನು ನೂತನ ಅಧ್ಯಕ್ಷರಾಗಿ ಚುನಾವಣಾಧಿಕಾರಿ ಜಯರಾಮ ಕೆ. ಘೋಷಿಸಿದರು. ಈ ಮೊದಲು ಅಧ್ಯಕ್ಷರಾಗಿದ್ದ ಎಚ್.ಗಣೇಶ ಕಾಮತ್ ರಾಜೀನಾಮೆ ನೀಡಿದ್ದು, ಈ ಕಾರಣದಿಂದ ಮತ್ತೊಮ್ಮೆ ಚುನಾವಣೆ ನಡೆದಿದೆ.

ಉಪಾಧ್ಯಕ್ಷ ಜಿ.ವಿಶ್ವನಾಥ ಆಚಾರ್ಯ, ನಿರ್ದೇಶಕರಾದ ಎಚ್.ಗಣೇಶ ಕಾಮತ್, ಎನ್.ಮಾಧವ ಕಿಣಿ, ಎಸ್.ವೆಂಕಟರಮಣ ಆಚಾರ್ಯ, ಬಿ.ರಾಘವೇಂದ್ರ ಪೈ, ಜಿ.ವೇದವ್ಯಾಸ ಆಚಾರ್ಯ, ಕೆ.ಪರಮೇಶ್ವರ ನಾಯಕ್, ನಾಗಪ್ರಸಾದ ಪೈ ಎಂ.ಜಿ, ಕೆ.ಗೋಪಾಲಕೃಷ್ಣ ನಾಯಕ್, ಮಹಾಬಲ ಪೂಜಾರಿ, ಕಿರಣ್ ಫಿಲಿಪ್ ಪಿಂಟೊ, ಮಾಲಾ ಕೆ.ನಾಯಕ್, ಗೀತಾ ನಾಯಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net