ಗಂಗೊಳ್ಳಿ: ದಾನಿ ಉಮೇಶ್ ಶೆಟ್ಟಿ ರಾಯರಮಕ್ಕಿ ನೀಡಿರುವ ಸಮವಸ್ತ್ರ ಹಾಗೂ ಸುರೇಶ ಶೆಟ್ಟಿ ಗೋಳಿಮಕ್ಕಿ ನೀಡಿರುವ ಗುರುತಿನ ಕಾರ್ಡು, ಬೆಲ್ಟ್ ವಿತರಣಾ ಕಾರ್ಯಕ್ರಮ ಬೈಂದೂರು ಶೈಕ್ಷಣಿಕ ವಲಯದ ಕದಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆಯಿತು.
ಎಸ್‌ಡಿಎಂಸಿ ಅಧ್ಯಕ್ಷ ಸುಧೀಂದ್ರ ಉಡುಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರಜನಿ, ಕೆರಾಡಿ ಕ್ಲಸ್ಟರ್ ಸಿಆರ್‌ಪಿ ನಾಗರಾಜ ಶೆಟ್ಟಿ, ಇಡೂರು ಗ್ರಾಮ ಪಂಚಾಯಿತಿ ಸದಸ್ಯ ಅಶೋಕ ಶೆಟ್ಟಿ ದೇವಲ್ಕುಂದ, ಮುಕಾಂಬು ಶೆಟ್ಟಿ ರಾಯರಮಕ್ಕಿ, ಸಹಶಿಕ್ಷಕಿ ಶೈಲಜಾ ಶೆಟ್ಟಿ, ಅಂಗನವಾಡಿ ಶಿಕ್ಷಕಿ ಶೋಭಾರತ್ನ ಆರ್.ಶೆಟ್ಟಿ, ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ರಾಘವೇಂದ್ರ ಗುಲ್ವಾಡಿ ಕಾರ್ಯಕ್ರಮ ನಿರೂಪಿಸಿದರು.