ಇಂದು ದಸರೆಯಲ್ಲಿ ರಾಷ್ಟ್ರಪತಿ ಧರಿಸಿದ್ದು 70 ಸಾವಿರ ರೂ. ಬೆಲೆಯ ಮೈಸೂರು ರೇಷ್ಮೆ ಸೀರೆ

1358012
Published on

ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ದಸರಾ ಉದ್ಘಾಟನಾ ಸಮಾರಂಭಕ್ಕೆ ಮೈಸೂರಿನಲ್ಲಿ ತಯಾರಿಸಲಾದ ರೇಷ್ಮೆ ಸೀರೆಯನ್ನೇ ಧರಿಸಿದ್ದು ವಿಶೇಷವಾಗಿತ್ತು.

ದಸರಾ ಉದ್ಘಾಟನೆಗೆ ರಾಷ್ಟ್ರಪತಿಯವರನ್ನು ಆಹ್ವಾನಿಸಲು ದೆಹಲಿಗೆ ಹೋಗಿದ್ದಾಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಈ ಸೀರೆಯನ್ನು ದ್ರೌಪದಿ ಮುರ್ಮು ಅವರಿಗೆ ಉಡುಗೊರೆಯಾಗಿ ನೀಡಿದ್ದರು.

ಇಂದು ರಾಷ್ಟ್ರಪತಿಯವರು ಅದೇ ಸೀರೆ ಧರಿಸಿ ಮೈಸೂರಿಗೆ ಬಂದಿದ್ದರು. 70 ಸಾವಿರ ರೂಪಾಯಿ ಬೆಲೆಯ, ಕೆನೆ ಬಣ್ಣದ ಈ ರೇಷ್ಮೆ ಸೀರೆ, ವೇದಿಕೆ ಕಾರ್ಯಕ್ರಮದಲ್ಲೂ ಎಲ್ಲರ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net