ಭೂಮಿಯ ಫಲವತ್ತತೆ ಕಾಪಾಡಿ

Published on

ಸಿದ್ದಾಪುರ: ರೈತರು ಜಮೀನುಗಳಿಗೆ ರಾಸಾಯನಿಕ ಗೊಬ್ಬರ-ಕ್ರಿಮಿನಾಶಕ ಬಳಕೆ ಕಡಿಮೆ ಮಾಡಿ ಭೂಮಿಯ ಫಲವತ್ತೆ ಕಾಪಾಡಬೇಕು ಎಂದು ಕೃಷಿ ಅಧಿಕಾರಿ ವೈ.ಸುಧಾಕರ ಹೇಳಿದರು.

ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಇತ್ತೀಚಿಗೆ ಹಮ್ಮಿಕೊಂಡಿದ್ದ ನೆಲ, ಜಲ ಸಂರಕ್ಷಣೆ ಮತ್ತು ಮಳೆ ಕೊಯ್ಲು ಪದ್ಧತಿ ಕುರಿತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಣ್ಣಿನ ಸವಕಳಿ ತಡೆಯುವ ನಿಟ್ಟಿನಲ್ಲಿ ರೈತಾಪಿ ವರ್ಗ ಗಮನ ಹರಿಸಬೇಕು. ರಾಸಾಯನಿಕಮುಕ್ತ ಆಹಾರ ಬೆಳೆಯಲು ಮುಂದಾಗಬೇಕು. ಭೂಮಿಯ ಫಲವತ್ತತೆ ವೃದ್ಧಿಸಲು ಭತ್ತದ ಬೆಳೆ ಜತೆ ಪರ್ಯಾಯ ಬೆಳೆಗಳನ್ನು ಬೆಳೆಯಬೇಕು ಎಂದರು. ನೀರಾವರಿ ಇಲಾಖೆ ಅಧಿಕಾರಿ ಕಿರಣ್, ನೀರಿನ ಸಂರಕ್ಷಣೆ ಮತ್ತು ಮಳೆ ನೀರು ಇಂಗಿಸುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.

ಕೃಷಿ ಮೇಲ್ವಿಚಾರಕ ಎನ್.ಗಂಗಾಧರಪ್ಪ, ನೀರಾವರಿ ಇಲಾಖೆ ತಾಂತ್ರಿಕ ಸಹಾಯಕಿ ಸಹನಾ, ವಲಯ ಮೇಲ್ವಿಚಾರಕ ಶಿವ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net