ಭಾರತೀಯ ಸಂಸ್ಕೃತಿ ಉಳಿಸಿ- ಬೆಳೆಸಿ

1sirsi3 VHP
Published on

ಶಿರಸಿ: ನಾವೆಲ್ಲರೂ ಭಾರತೀಯ ಸಂಸ್ಕೃತಿಯನ್ನು ಉಳಿಸಿ- ಬೆಳೆಸಬೇಕಾಗಿದೆ. ನಾವೆಲ್ಲರೂ ಒಂದೇ ಎನ್ನುವ ಮನೋಭಾವ ನಮ್ಮಲ್ಲಿ ಮೂಡಬೇಕಾಗಿದೆ ಎಂದು ಬನವಾಸಿ ಜಡೆಮಠದ ಡಾ. ಮಹಾಂತ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.


ಶನಿವಾರ ಬನವಾಸಿಯಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದಿಂದ ಆಯೋಜಿಸಿದ್ದ ಶೌರ್ಯ ಜಾಗರಣಾ ರಥಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.


ವಿಶ್ವ ಹಿಂದು ಪರಿಷತ್​ನ ಪ್ರಾಂತ್ಯ ಉಪಾಧ್ಯಕ್ಷ ಗಂಗಾಧರ ಹೆಗಡೆ ಮಾತನಾಡಿ, ಭಾರತದ ಮೇಲೆ ಅಕ್ರಮಣ ನಡೆದಾಗಲೂ ಹಿಂದು ಧರ್ಮ ಉಳಿದಿದೆ. ಹಿಂದು ಧರ್ಮದ್ದು ಸೋಲಿನ ಇತಿಹಾಸವಲ್ಲ. ಪರಾಕ್ರಮದ ಇತಿಹಾಸ ಎನ್ನುವುದನ್ನು ಸಮಾಜಕ್ಕೆ ತಿಳಿಸುವುದು ಅಗ್ಯವಿದೆ. ಹಿಂದು ಧರ್ಮ ರಕ್ಷಣೆಗಾಗಿ ಅನೇಕ ಮಹನೀಯರ ತ್ಯಾಗ ಮತ್ತು ಬಲಿದಾನವಿದೆ. ಇದನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.


ವಿಶ್ವ ಹಿಂದು ಪರಿಷತ್ ಸ್ಥಾಪನೆಯಾಗಿ 60 ವರ್ಷ ಹಾಗೂ ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ ನಿರ್ವಣವಾಗುತ್ತಿರುವ ಹಿನ್ನೆಲೆಯಲ್ಲಿ ಶೌರ್ಯ ಜಾಗರಣ ರಥಯಾತ್ರೆ ನಡೆಯುತ್ತಿದೆ ಅ. 12ರಂದು ಶಿರಸಿಯಲ್ಲಿ ಸಂಪನ್ನಗೊಳ್ಳಲಿದೆ ಎಂದರು.


ಶೌರ್ಯ ಜಾಗರಣ ರಥಯಾತ್ರೆಗೆ ಯುಗಾದಿ ಉತ್ಸವ ಸಮಿತಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸದ ಸದಸ್ಯರು, ಸಾರ್ವಜನಿಕರು ಪೂರ್ಣ ಕುಂಭದೊಂದಿಗೆ ಪುಷ್ಪಾರ್ಚನೆ, ಹಣ್ಣು ಕಾಯಿ ಅರ್ಪಿಸಿ ಸ್ವಾಗತಿಸಿದರು.


ಟಿ.ಜಿ. ನಾಡಿಗೇರ, ರಾಷ್ಟಿ›ೕಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಚಾರಕ ಗಣೇಶ್ ತೆಕ್ಕಟ್ಟೆ, ವಿಹಿಂಪ ಶಿರಸಿ ಜಿಲ್ಲಾ ಉಪಾಧ್ಯಕ್ಷ ಕೇಶವ ಮರಾಠೆ, ಕಾರ್ಯದರ್ಶಿ ಗಣಪತಿ ಭಟ್, ಶೌರ್ಯ ಜಾಗರಣ ರಥಯಾತ್ರೆ ವಿಭಾಗ ಪ್ರಮುಖ ಅಮೀತ ಶೇಟ್, ತಾಲೂಕು ರಥ ಪ್ರಮುಖ ರಘು ನಾಯ್್ಕ ರವೀಶ್ ಹೆಗಡೆ, ಅರವಿಂದ ಬಳೆಗಾರ, ಸುಧೀರ್ ನಾಯರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net