ಖರೀದಿಗೆ ಮುಗಿಬಿದ್ದ ಜನರು

IMG-20240408-WA0204
Published on

ಗುಂಡ್ಲುಪೇಟೆ: ತಾಲೂಕಿನಲ್ಲಿ ಬಿಸಿಲ ಬೇಗೆ ಹಾಗೂ ಬೆಲೆ ಏರಿಕೆ ನಡುವೆ ಯುಗಾದಿ ಹಬ್ಬ ಆಚರಣೆಗೆ ಸೋಮವಾರ ಹೊಸಬಟ್ಟೆ, ಹೂ ಹಣ್ಣುಗಳ ಖರೀದಿ ಜೋರಾಗಿತ್ತು.


ಹಗಲಿನಲ್ಲಿ ಮನೆಯಿಂದ ಹೊರಬರಲು ಸಾಧ್ಯವಾಗದಂತ ಬಿಸಿಲು ಇದ್ದ ಕಾರಣ ಸಾರ್ವಜನಿಕರು ಸಂಜೆಯಾಗುತ್ತಿದ್ದಂತೆ ಮಾರುಕಟ್ಟೆಗೆ ಲಗ್ಗೆಯಿಟ್ಟರು. ಪಟ್ಟಣದ ರಸ್ತೆಗಳು ಜನಜಂಗುಳಿಯಿಂದ ತುಂಬಿ ಹೋಗಿದ್ದವು. ವಾಹನಗಳನ್ನು ಸಿಕ್ಕ ಸಿಕ್ಕಲ್ಲಿ ನಿಲ್ಲಿಸಿದ್ದರಿಂದ ಸಂಚಾರಕ್ಕೆ ಅಡಚಣೆಯಾಗಿತ್ತು. ಹಣ್ಣು, ಹೂವು ಹಾಗೂ ಬಟ್ಟೆ ಖರೀದಿಗೆ ಜನರು ಮುಂದಾಗಿದ್ದರು. ಹೂವಿನ ಬೆಲೆ ಹೆಚ್ಚಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net