ಸೇನೆಗೆ ಸೇರಲು ಮುಂದಾಗಿ

ಸೇನೆಯಿಂದ ನಿವೃತ್ತರಾಗಿ ಆಗಮಿಸಿದ ಗುಂಡಗತ್ತಿ ಆಂಜನೇಯ ಅವರನ್ನು ಹರಪನಹಳ್ಳಿ ತಾಲೂಕಿನ ಕೆರೆಗುಡಿಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಸ್ವಾಗತಿಸಿದರು. ಕವಿತಾ ಆಂಜನೇಯ, ಪ್ರಮುಖರಾದ ಗುಂಡಗತ್ತಿ ಗಣೇಶ, ಸಿ.ಶಿವಣ್ಣ, ಧರ್ಮಣ್ಣ, ಬಡಿಗೇರ್ ದುರುಗಪ್ಪ, ಪೂಜಾರ್ ತಿಮ್ಮಣ್ಣ, ವಕೀಲ ಹಾಲೇಶ್, ರಮೇಶ್, ನಾಗರಾಜ, ತಿಪ್ಪೇಶ್ ಇತರರಿದ್ದರು.

Published on

ಹರಪನಹಳ್ಳಿ: ಭಾರತೀಯ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಕೆರೆಗುಡಿಹಳ್ಳಿ ಗ್ರಾಮದ ಗುಂಡಗತ್ತಿ ಆಂಜನೇಯ ಅವರನ್ನು ಬುಧವಾರ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.

ಯೋಧ ಗುಂಡಗತ್ತಿ ಆಂಜನೇಯ ಮಾತನಾಡಿ, ಸೇನೆಯಲ್ಲಿ ಸೇವೆ ಸಲ್ಲಿಸುವುದು ಪುಣ್ಯದ ಕಾರ್ಯ. ಯುವಕರು ಸೇನೆಗೆ ಸೇರಲು ಮುಂದಾಗಬೇಕು. ದೇಶದ ಸೇವೆ ಸಲ್ಲಿಸುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಸೈನಿಕರಾಗಲು ದೃಢ ಮನಸ್ಸು ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ನೆರೆ ರಾಷ್ಟ್ರಗಳು ಅಪಾಯಕಾರಿಯಾಗಿದ್ದು, ಯಾವ ಸಂದರ್ಭದಲ್ಲಾದರೂ ಯುದ್ಧ ನಡೆಯಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net